varthabharthi

ಗಲ್ಫ್ ಸುದ್ದಿ

ಗಾಂಧಿ ಜಯಂತಿಯಂದು ರಾಷ್ಟ್ರಪಿತನ ಚಿತ್ರಗಳಿಂದ ಕಂಗೊಳಿಸಿದ ಬುರ್ಜ್ ಖಲೀಫಾ

ವಾರ್ತಾ ಭಾರತಿ : 3 Oct, 2019

Photo: Khaleej Times

ದುಬೈ: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಆಚರಣೆಯಂಗವಾಗಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ದುಬೈಯ ಬುರ್ಜ್ ಖಲೀಫಾ ಗಾಂಧೀಜಿಯ ಹಾಗೂ ಭಾರತದ ತ್ರಿವರ್ಣ ಧ್ವಜದ ಚಿತ್ರಗಳೊಂದಿಗೆ ಕಂಗೊಳಿಸಿದೆ.

ಮಹಾತ್ಮ ಗಾಂಧಿಗೆ ದುಬೈಯಲ್ಲಿ ತೋರಿಸಿದ ಅಪಾರ ಗೌರವಕ್ಕೆ ಭಾರತದ ಕಾನ್ಸುಲೇಟ್ ಜನರಲ್ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.

ಫ್ರಾನ್ಸ್ ಹಾಗೂ ಶ್ರೀಲಂಕಾ ದೇಶಗಳೂ ಮಹಾತ್ಮ ಗಾಂಧಿಯ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಿ ವಿವಿಧ ಇತರ ಕಾರ್ಯಕ್ರಮಗಳನ್ನೂ ಆಯೋಜಿಸಿವೆ. ಮಾರಿಷಸ್, ಸೌದಿ ಅರೇಬಿಯಾ, ಲೆಬನಾನ್, ಮ್ಯಾನ್ಮಾರ್, ಸ್ವಿಝಲ್ರ್ಯಾಂಡ್ ಮತ್ತಿತರ ದೇಶಗಳೂ ಗಾಂಧಿ ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸಿವೆ. ವಿಶ್ವದಾದ್ಯಂತ ಭಾರತೀಯ ಹೈಕಮಿಷನ್ ಕಚೇರಿಗಳಲ್ಲಿ  ಕೂಡ ಗಾಂಧಿ ಜಯಂತಿ ಆಚರಣೆ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)