varthabharthi

ಕ್ರೀಡೆ

ಜಪಾನ್ ಓಪನ್

ನೊವಾಕ್ ಜೊಕೊವಿಕ್ ಸೆಮಿ ಫೆನಲ್‌ಗೆ ಲಗ್ಗೆ

ವಾರ್ತಾ ಭಾರತಿ : 5 Oct, 2019

ಟೋಕಿಯೊ, ಅ.4: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಟೋಕಿಯೊ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯದ ಜೊಕೊವಿಕ್ ಫ್ರಾನ್ಸ್‌ನ ಲುಕಾಸ್ ಪೌಲ್ಲಿ ಅವರನ್ನ್ನು 6-1, 6-2 ನೇರ ಸೆಟ್‌ಗಳಿಂದ ಸೋಲಿಸಿದರು.

 16 ಬಾರಿಯ ಚಾಂಪಿಯನ್ ಜೊಕೊವಿಕ್ ಮುಂದಿನ ಸುತ್ತಿನಲ್ಲಿ 2017ರ ಚಾಂಪಿಯನ್ ಡೇವಿಡ್ ಗೊಫಿನ್ ಅಥವಾ ಚುಂಗ್ ಹಿಯೊನ್‌ರನ್ನು ಮುಖಾಮುಖಿಯಾಗಲಿದ್ದಾರೆ. ಮೊದಲ ಬಾರಿ ಜಪಾನ್ ಓಪನ್‌ನಲ್ಲಿ ಆಡುತ್ತಿರುವ ಜೊಕೊವಿಕ್ ಇನ್ನೂ ಒಂದು ಸೆಟ್‌ನ್ನು ಕಳೆದುಕೊಂಡಿಲ್ಲ.

ಜೊಕೊವಿಕ್ ಯು.ಎಸ್. ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಎಡ ಭುಜನೋವಿನಿಂದಾಗಿ ಸ್ಟಾನ್ ವಾವ್ರಿಂಕ ವಿರುದ್ಧ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಮೊದಲ ಬಾರಿ ಜಪಾನ್ ಓಪನ್‌ನಲ್ಲಿ ಆಡುತ್ತಿದ್ದಾರೆ.

ಜೊಕೊವಿಕ್ ಮೇನಲ್ಲಿ ನಡೆದ ಮ್ಯಾಡ್ರಿಡ್ ಓಪನ್‌ನ ಬಳಿಕ ಆಡಿದ 7 ಟೂರ್ನಮೆಂಟ್‌ಗಳ ಪೈಕಿ 6ರಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)