varthabharthi

ಕ್ರೀಡೆ

ಭಾರತದ ಜಮುನಾ ಶುಭಾರಂಭ

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್

ವಾರ್ತಾ ಭಾರತಿ : 5 Oct, 2019

 ಮಾಸ್ಕೋ, ಅ.4: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ ಜಮುನಾ ಬೊರೊ(54ಕೆಜಿ)ಭಾರತಕ್ಕೆ ಗೆಲುವಿನ ಆರಂಭ ಒದಗಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡ ಬೊರೊ ಮಂಗೋಲಿಯದ ಮಿಚಿಡ್ಮಾ ಎರ್ಡೆನಿಡಲೈ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. ಅಸ್ಸಾಂ ರೈಫಲ್ಸ್ ಉದ್ಯೋಗಿಯಾಗಿರುವ ಜಮುನಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಜೀರಿಯದ 5ನೇ ಶ್ರೇಯಾಂಕದ ಉದಾದ್‌ರನ್ನು ಎದುರಿಸಲಿದ್ದಾರೆ. ಉದಾದ್ 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮಾಜಿ ನ್ಯಾಶನಲ್ ಚಾಂಪಿಯನ್ ನೀರಜ್(57ಕೆಜಿ) ಹಾಗೂ ಸವೀಟಿ ಬೂರಾ(75ಕೆಜಿ)ಸ್ಪರ್ಧಿಸಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)