ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ 431 ರನ್ಗೆ ಆಲೌಟ್
ಭಾರತಕ್ಕೆ 71 ರನ್ ಮುನ್ನಡೆ, ಅಶ್ವಿನ್ಗೆ ಏಳು ವಿಕೆಟ್
ವಿಶಾಖಪಟ್ಟಣ, ಅ.5: ಆಫ್ ಸ್ಪಿನ್ನರ್ ಆರ್.ಅಶ್ವಿನ್ ಸ್ಪಿನ್ ಮೋಡಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 431 ರನ್ ಗಳಿಸಿ ಆಲೌಟಾಯಿತು. ಭಾರತಕ್ಕೆ 71 ರನ್ ಮುನ್ನಡೆ ಬಿಟ್ಟುಕೊಟ್ಟಿತು.
ನಾಲ್ಕನೇ ದಿನವಾದ ಶನಿವಾರ 8 ವಿಕೆಟ್ಗಳ ನಷ್ಟಕ್ಕೆ 385 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ದಕ್ಷಿಣ ಆಫ್ರಿಕಾದ ಪರ ಭಾರತ ಮೂಲದ ಕ್ರಿಕೆಟ್ ಮುತ್ತಸ್ವಾಮಿ(ಔಟಾಗದೆ 33, 106 ಎಸೆತ, 4 ಬೌಂಡರಿ)ಒಂದಷ್ಟು ಪ್ರತಿರೋಧ ತೋರಿದರು. ಕಾಗಿಸೊ ರಬಾಡ 15 ಹಾಗೂ ಕೇಶವ ಮಹಾರಾಜ್ 9 ರನ್ ಗಳಿಸಿದರು. ಕೇಶವ್ ಹಾಗೂ ರಬಾಡ ವಿಕೆಟನ್ನು ಉರುಳಿಸಿದ ಆರ್.ಅಶ್ವಿನ್ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ಗೆ ತೆರೆ ಎಳೆದರು. ಭಾರತ 71 ರನ್ ಮುನ್ನಡೆ ಸಾಧಿಸಲು ನೆರವಾದರು.
ತಮಿಳುನಾಡು ಸ್ಪಿನ್ನರ್ ಅಶ್ವಿನ್ 46.2 ಓವರ್ಗಳಲ್ಲಿ 145 ರನ್ಗೆ ಏಳು ವಿಕೆಟ್ಗಳನ್ನು ಕಳೆದುಕೊಂಡಿದೆ.
Next Story