varthabharthi

ಅಂತಾರಾಷ್ಟ್ರೀಯ

ನಿರುದ್ಯೋಗದ ವಿರುದ್ಧ ಇರಾಕ್‌ನಲ್ಲಿ ಹಬ್ಬಿದ ಹಿಂಸಾಚಾರ: ಸಾವಿನ ಸಂಖ್ಯೆ ಕನಿಷ್ಠ 60ಕ್ಕೆ ಏರಿಕೆ

ವಾರ್ತಾ ಭಾರತಿ : 5 Oct, 2019

ಫೋಟೊ ಕೃಪೆ: Reuters

ಬಗ್ದಾದ್ (ಇರಾಕ್), ಅ. 5: ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ನಾಲ್ಕು ದಿನಗಳಿಂದ ಇರಾಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ ಎಂದು ಇರಾಕ್ ಮಾನವಹಕ್ಕುಗಳ ಆಯೋಗ ಶುಕ್ರವಾರ ಹೇಳಿದೆ.

ನಾಲ್ಕನೆ ದಿನವಾದ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ, ಪ್ರತಿಭಟನಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿದರು.

ನಾಲ್ಕನೇ ದಿನದಂದು ಒಂದೇ ಆಸ್ಪತ್ರೆಯಲ್ಲಿ 18 ಮಂದಿ ಮೃತಪಟ್ಟರು. ಈವರೆಗೆ 1,600 ಮಂದಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಏರುವ ಸಾಧ್ಯತೆಯಿದೆ.ಶುಕ್ರವಾರ ಬಗ್ದಾದ್ ಮತ್ತು ಇತರ ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು.

ಸರಕಾರದ ರಾಜೀನಾಮೆಗೆ ಒತ್ತಾಯ

ಸರಕಾರ ವಿರೋಧಿ ಪ್ರತಿಭಟನೆಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಇರಾಕ್ ಸರಕಾರ ರಾಜೀನಾಮೆ ನೀಡಬೇಕೆಂದು ದೇಶದ ಉರಿನಾಲಗೆಯ ಧರ್ಮ ಗುರು ಮುಕ್ತಾದ ಸದರ್ ಕರೆ ನೀಡಿದ್ದಾರೆ.

ಇನ್ನಷ್ಟು ಸಾವುಗಳನ್ನು ತಡೆಯುವುದಕ್ಕಾಗಿ ಸರಕಾರ ರಾಜೀನಾಮೆ ನೀಡಬೇಕು ಹಾಗೂ ವಿಶ್ವಸಂಸ್ಥೆಯ ಉಸ್ತುವಾರಿಯಲ್ಲಿ ಮಧ್ಯಂತರ ಚುನಾವಣೆ ನಡೆಯಬೇಕು ಎಂದು ಮಾಜಿ ಶಿಯಾ ಬಂಡುಕೋರ ನಾಯಕ ಹೇಳಿಕೆಯೊಂದರಲ್ಲಿ ಒತ್ತಾಯಿಸಿದ್ದಾರೆ. ಸಂಸತ್ತಿನಲ್ಲಿ ಅವರ ಪಕ್ಷ ಅತ್ಯಂತ ದೊಡ್ಡ ಬಣವಾಗಿದೆ.

 ಇರಾಕಿಗಳ ರಕ್ತ ಹರಿಯುತ್ತಿರುವಾಗ ನಾನು ವೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)