varthabharthi

ಕ್ರೀಡೆ

ಪ್ರೊ ಕಬಡ್ಡಿ

ಯು.ಪಿ.ಯೋಧಾ ಪ್ಲೇ-ಆಫ್‌ಗೆ ತೇರ್ಗಡೆ

ವಾರ್ತಾ ಭಾರತಿ : 5 Oct, 2019

ಗ್ರೇಟರ್‌ನೊಯ್ಡ, ಅ.5: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದಿಲ್ಲಿ ದಬಾಂಗ್ ತಂಡವನ್ನು 50-33 ಅಂಕಗಳ ಅಂತರದಿಂದ ಮಣಿಸಿದ ಯು.ಪಿ.ಯೋಧಾ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ.

122ನೇ ಲೀಗ್ ಪಂದ್ಯದಲ್ಲಿ 11 ರೈಡ್ ಪಾಯಿಂಟ್ಸ್ ಗಳಿಸಿದ ಮೋನು ಗೊಯತ್ ಯು.ಪಿ. ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದರು. ಗೊಯತ್ ಆರಂಭದಲ್ಲೇ ಅಮೂಲ್ಯ ರೈಡ್ ಪಾಯಿಂಟ್ಸ್ ಪಡೆದರು. ಗೊಯತ್‌ಗೆ ಶ್ರೀಕಾಂತ್ ಜಾಧವ್(9) ಹಾಗೂ ನಿತೀಶ್ ಕುಮಾರ್(6)ಸಾಥ್ ನೀಡಿದರು. ಯು.ಪಿ. 19ನೇ ಪಂದ್ಯದಲ್ಲಿ 11ನೇ ಜಯ ಸಾಧಿಸಿ 63 ಅಂಕ ಗಳಿಸಿ 6ನೇ ಸ್ಥಾನದೊಂದಿಗೆ ಸೆಮಿ ಫೈನಲ್ ತಲುಪಿತು.

ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ದಿಲ್ಲಿ ಪರ ನೀರಜ್ 11 ಹಾಗೂ ಸೊಂಬಿರ್ 9 ಅಂಕ ಗಳಿಸಿದರು.

ಲೀಗ್‌ನ 123ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಗುಜರಾತ್ ಫೋರ್ಚುನ್ ಜೈಂಟ್ಸ್ ತಂಡ ವನ್ನು 39-33 ಅಂಕಗಳ ಅಂತರದಿಂದ ಮಣಿಸಿತು. ಪಾಟ್ನಾ ಪರ ಪರ್ದಿಪ್ ನರ್ವಾಲ್ 17 ಹಾಗೂ ಮೋರೆ ಜಿಬಿ 15 ಅಂಕ ಗಳಿಸಿದರು. ಪಾಟ್ನಾ ಹಾಗೂ ಗುಜರಾತ್ ತಂಡಗಳೆರಡೂ ಪ್ಲೇ-ಆಫ್ ರೇಸ್‌ನಲ್ಲಿಲ್ಲ. ಈ ಫಲಿತಾಂಶ ಯಾವುದೇ ಪರಿಣಾಮಬೀರುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)