varthabharthi

ಸಿನಿಮಾ

ಬಾಲಿವುಡ್‌ಗೆ ಗೀತಾಗೋವಿಂದ

ವಾರ್ತಾ ಭಾರತಿ : 6 Oct, 2019

ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಚಿತ್ರದ ಪೋಸ್ಟ್‌ಪ್ರೊಡಕ್ಷನ್ ಕೆಲಸ ಪೂರ್ಣ ಗೊಳಿಸಿರುವ ನಿರ್ದೇಶಕ ರೋಹಿತ್ ಶೆಟ್ಟಿ, ಹೊಸ ಪ್ರಾಜೆಕ್ಟ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ವಿಜಯ್‌ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್‌ಹಿಟ್ ತೆಲುಗು ಚಿತ್ರ ‘ಗೀತಾಗೋವಿಂದ’ದ ರಿಮೇಕ್ ಹಕ್ಕುಗಳನ್ನು ಅವರು ಖರೀದಿಸಿದ್ದಾರೆ. ಈ ಚಿತ್ರವನ್ನು ಅವರು ಬಾಲಿವುಡ್‌ನಲ್ಲಿ ನಿರ್ಮಿಸಲಿದ್ದಾರೆ. ಆದರೆ ನಿರ್ದೇಶನದ ಕೆಲಸವನ್ನು ಉದಯೋನ್ಮುಖ ನಿರ್ದೇಶಕರೊಬ್ಬರಿಗೆ ವಹಿಸುವ ಯೋಚನೆ ಅವರದ್ದಾಗಿದೆ.

2018ರ ಆಗಸ್ಟ್ 15ರಂದು ಬಿಡುಗಡೆಯಾದ ತೆಲುಗಿನ ಗೀತಾ ಗೋವಿಂದ ಚಿತ್ರಕ್ಕೆ ಪರಶುರಾಮ್ ಆ್ಯಕ್ಷನ್ ಕಟ್ ಹೇಳಿದ್ದರು. ಅಲ್ಲುಅರವಿಂದ್ ಹಾಗೂ ಬನ್ನಿ ವಾಸು ಚಿತ್ರವನ್ನು ನಿರ್ಮಿಸಿದ್ದರು. ಕೇವಲ 5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಗೀತಾಗೋವಿಂದ, ವಿಶ್ವದಾದ್ಯಂತ ತೆರೆಕಂಡು 132 ಕೋಟಿ ರೂ.ಗೂ ಅಧಿಕ ಹಣವನ್ನು ಬಾಚಿತ್ತು.

ರೋಹಿತ್ ನಿರ್ದೇಶನದ ಹಿಂದಿನ ಚಿತ್ರ ಸಿಂಬಾ ಕೂಡಾ ತೆಲುಗಿನಲ್ಲಿ ಭಾರೀ ಯಶಸ್ಸು ಕಂಡ ಟೆಂಪರ್ ಚಿತ್ರದ ರಿಮೇಕ್ ಆಗಿತ್ತು. ರಣವೀರ್‌ಸಿಂಗ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಈ ಚಿತ್ರ ಕೂಡಾ ಭರ್ಜರಿ ಯಶಸ್ಸು ಕಂಡಿತ್ತು.

ಇದೀಗ ಗೀತಾಗೋವಿಂದ ಚಿತ್ರದ ಬಾಲಿವುಡ್ ರಿಮೇಕ್‌ನ ನಾಯಕ-ನಾಯಕಿಯರಾಗಿ ರೋಹಿತ್ ಯಾರನ್ನು ಆಯ್ಕೆ ಮಾಡಲಿದ್ದಾರೆಂಬ ಬಗ್ಗೆ ಬಾಲಿವುಡ್‌ನಲ್ಲಿ ಭಾರೀ ಕುತೂಹಲ ಕೆರಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)