varthabharthi

ಗಲ್ಫ್ ಸುದ್ದಿ

ಕೆಸಿಎಫ್ ಒಮಾನ್: ಮೀಲಾದ್ ಅಭಿಯಾನಕ್ಕೆ ಚಾಲನೆ

ವಾರ್ತಾ ಭಾರತಿ : 6 Oct, 2019

ಒಮಾನ್, ಅ.6: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಒಮಾನ್ ಇದರ ವತಿಯಿಂದ ಇತ್ತೀಚೆಗೆ ಅಲ್ ಹುದಾ‌ ಮದ್ರಸ ಗೋಬ್ರದಲ್ಲಿ 2019 ‌ಮೀಲಾದ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ನಿರ್ಣಯದಂತೆ ಮೀಲಾದ್ ಅಭಿಯಾನವು ಅಕ್ಟೋಬರ್ 4 ರಿಂದ ಡಿಸೆಂಬರ್ 4 ರ ತನಕ ಒಮಾನಿನದ್ಯಾಂತ ನಡೆಯಲಿದೆ.

ಸಭೆಯಲ್ಲಿ ಸಯ್ಯಿದ್ ಸೈಫುದ್ದೀನ್ ತಂಙಳ್ ಸಖಾಫಿ ಎಮ್ಮೆಮ್ಮಾಡು ಇವರು ಪ್ರಾರ್ಥನೆ ನೆರವೇರಿಸಿದರು. ಕೆಸಿಎಫ್ ಒಮಾನ್ ಅಧ್ಯಕ್ಷ ಅಯ್ಯೂಬ್ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಸುಳ್ಯ, ಕೋಶಾಧಿಕಾರಿ ಆರಿಫ್ ಕೋಡಿ, ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾಹ್ ಸಖಾಫಿ, ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ ಶಮೀರ್ ಉಸ್ತಾದ್ ಹೂಡೆ, ಮೀಲಾದ್ ಸ್ವಾಗತ ಸಮಿತಿ ವೈಸ್ ಚೇರ್ಮೆನ್ ಹಂಝ ಕನ್ನಂಗಾರ್, ಪ್ರತಿಬೋತ್ಸವದ ಚೇರ್ಮೆನ್ ಹನೀಫ್ ಸಅದಿ, ಎಲ್ಲಾ ವಿಭಾಗದ ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸಭೆಯನ್ನು ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಸಯ್ಯಿದ್ ಆಬಿದ್ ತಂಙಳ್ ಅಲ್ ಹೈದ್ರೋಸಿ ಸ್ವಾಗತಿಸಿ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)