varthabharthi

ಅಂತಾರಾಷ್ಟ್ರೀಯ

ಅಫ್ಘಾನ್ ಪಡೆಗಳಿಂದ ಕನಿಷ್ಠ 89 ತಾಲಿಬಾನ್ ಬಂಡುಕೋರರ ಹತ್ಯೆ

ವಾರ್ತಾ ಭಾರತಿ : 6 Oct, 2019

ಕಾಬುಲ್, ಅ.6: ಕಳೆದ 24 ತಾಸುಗಳಲ್ಲಿ ಅಫ್ಘಾನಿಸ್ತಾನದ ತಾಹರ್ ಪ್ರಾಂತದಲ್ಲಿ ನಡೆದ ಅಫ್ಘಾನ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 89 ಮಂದಿ ತಾಲಿಬಾನ್ ಬಂಡುಕೋರರು ಹತರಾಗಿದ್ದಾರೆ ಹಾಗೂ 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ‘‘ಅಫ್ಘಾನಿಸ್ತಾನದಾದ್ಯಂತ ತಾಲಿಬಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಹಲವೆಡೆ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲಾಗಿದೆ. ಕಳೆದ 24 ತಾಸುಗಳಲ್ಲಿ ತಾಹಿರ್ ಪ್ರಾಂತ ಒಂದರಲ್ಲೇ 89 ಮಂದಿ ಬಂಡುಕೋರರನ್ನು ಹತೈಯಲಾಗಿದ್ದು, ಇತರ 67 ಮಂದಿ ಗಾಯಗೊಂಡಿದ್ದಾರೆ’’ ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರ ರೂಹುಲ್ಲಾ ಅಹ್ಮದ್‌ಝಾಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಹರ್ ಪ್ರಾಂತದ ಬಹ್ರಾಕ್ ಜಿಲ್ಲೆಯನ್ನು ಸರಕಾರಿ ಪಡೆಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)