varthabharthi

ಅಂತಾರಾಷ್ಟ್ರೀಯ

ಕಾಬೂಲ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಟ 10 ಸಾವು

ವಾರ್ತಾ ಭಾರತಿ : 7 Oct, 2019

ಕಾಬೂಲ್ / ಜಲಾಲಾಬಾದ್, ಅ.7:  ಪೂರ್ವ ನಗರ ಜಲಾಲಾಬಾದ್‌ನಲ್ಲಿ ಅಫ್ಘಾನಿಸ್ತಾನದ  ಭದ್ರತಾ ಪಡೆಗೆ ಸೋಮವಾರ ನೇಮಕಾತಿಯ ವೇಳೆ  ಮಿನಿಬಸ್ ನ್ನು ಗುರಿಯಾಗಿಸಿಕೊಂಡು ನಡೆದ  ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಮಕಾತಿ ಮಾಡಿದವರು ಕಾಬೂಲ್‌ಗೆ  ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು  ಎಂದು ನಂಗರ್‌ಹಾರ್ ಪ್ರಾಂತೀಯ ಮಂಡಳಿಯ ಸದಸ್ಯ ಸೊಹ್ರಾಬ್ ಖಾದೇರಿ ಹೇಳಿದರು.

ಸರಕುಗಳನ್ನು ಸಾಗಿಸಲು ಬಳಸುವ ಸಣ್ಣ ಮೋಟಾರು ವಾಹನದಲ್ಲಿ ಬಾಂಬ್ ಸ್ಫೋಟಗೊಂಡಿದೆ  ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)