varthabharthi

ಕರ್ನಾಟಕ

ಬೈಕ್ ಮರಕ್ಕೆ ಢಿಕ್ಕಿ: ಮೂವರು ಸವಾರರು ಸ್ಥಳದಲ್ಲೇ ಮೃತ್ಯು

ವಾರ್ತಾ ಭಾರತಿ : 7 Oct, 2019

ವಿಜಯಪುರ, ಅ.7: ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಕುರಗಟಕಿ ಬಳಿ ನಡೆದಿದೆ.

ಕುರಗಟಕಿ ನಿವಾಸಿಗಳಾದ ಮಹೇಶ ನರೂಟೆ(22) ಅಂಬಣ್ಣಾ ಹನಮಾನೆ(25) ಹಾಗೂ ಲೋಣಿ ಗ್ರಾಮದ ರಾಜಕುಮಾರ ಪೂಜಾರಿ(20) ಮೃತರು.

ಇವರು ಟಾಕಳಿ ಕಡೆಯಿಂದ ಕುರಗಟಕಿಗೆ ಹೋಗುವಾಗ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಮೂವರೂ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲೂಕಿನ ಮಂದ್ರೂಪ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)