varthabharthi

ರಾಷ್ಟ್ರೀಯ

ಗುರುವಾರದಿಂದ ಜಮ್ಮು ಕಾಶ್ಮೀರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ

ವಾರ್ತಾ ಭಾರತಿ : 7 Oct, 2019

ಹೊಸದಿಲ್ಲಿ, ಅ.7: 370ನೆ ವಿಧಿ ರದ್ದತಿ ಬಳಿಕ ಪ್ರವಾಸಿಗರು ಜಮ್ಮು ಕಾಶ್ಮೀರ ಪ್ರವೇಶಿಸದಂತೆ ಅಲ್ಲಿನ ಆಡಳಿತವು ಹೇರಿದ್ದ ನಿರ್ಬಂಧವನ್ನು ಇಂದು ಹಿಂಪಡೆದುಕೊಂಡಿದೆ. ಆದ್ದರಿಂದ ಗುರುವಾರದ ಬಳಿಕ ಪ್ರವಾಸಿಗರು ಕಾಶ್ಮೀರ ಪ್ರವೇಶಿಸಬಹುದಾಗಿದೆ.

"ರಾಜ್ಯಪಾಲ ಸತ್ಯಪಾಲ್ ಮಲಿಕೆ ಸಲಹಗಾರರು ಮತ್ತು ಮುಖ್ಯ ಕಾರ್ಯದರ್ಶಿಯ ಜೊತೆ ಪರಿಸ್ಥಿತಿ ಮತ್ತು ರಾಜ್ಯದ ಭದ್ರತೆಯ ವಿಚಾರವನ್ನು ಅವಲೋಕಿಸಿದ್ದಾರೆ. ಪ್ರವಾಸಿಗರಿಗೆ ಹೇರಲಾಗಿದ್ದ ನಿರ್ಬಂಧವನ್ನು ಹಿಂಪಡೆಯುವಂತೆ ಅವರು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ಗುರುವಾರದಂದು ಈ ನಿರ್ಬಂಧವನ್ನು ಹಿಂಪಡೆಯಲಾಗುವುದು" ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)