varthabharthi

ರಾಷ್ಟ್ರೀಯ

ಭಯೋತ್ಪಾದಕ ದಾಳಿಯನ್ನು ತಡೆಯುವ ಸರಕಾರದ ವಿಧಾನದಲ್ಲಿ ಪ್ರಮುಖ ಬದಲಾವಣೆ: ರಾಕೇಶ್ ಕುಮಾರ್ ಸಿಂಗ್

ವಾರ್ತಾ ಭಾರತಿ : 8 Oct, 2019

ಹೊಸದಿಲ್ಲಿ, ಅ.8: ನೆರೆಹೊರೆಯ ದೇಶದಲ್ಲಿರುವ ಈಗಿನ ವಾತಾವರಣದ ಹಿನ್ನೆಲೆಯಲ್ಲಿ ಭಯೋತ್ಪಾದಕ ದಾಳಿಯನ್ನು ನಿರ್ವಹಿಸುವ ವಿಧಾನದಲ್ಲಿ ಪ್ರಮುಖ ಬದಲಾವಣೆಯಾಗಿದೆ ಎಂದು ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ. 

ಮಂಗಳವಾರ 87 ನೇ ವಾಯುಪಡೆಯ ದಿನಾಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು. "ನೆರೆಹೊರೆಯಲ್ಲಿ ಪ್ರಸ್ತುತ ಭದ್ರತಾ ವಾತಾವರಣವು ಕಳವಳಕ್ಕೆ ಕಾರಣವಾಗಿದೆ. ಪುಲ್ವಾಮಾ ದಾಳಿಯು ರಕ್ಷಣಾ ವ್ಯವಸ್ಥೆಗೆ ನಿರಂತರ ಬೆದರಿಕೆ ಇರುವುದನ್ನು ನೆನಪಿಸುತ್ತದೆ ”ಎಂದು ಸುದ್ದಿ ಸಂಸ್ಥೆ ಎಎನ್ಐ ಗೆ ಏರ್ ಚೀಫ್ ಮಾರ್ಷಲ್ ಹೇಳಿದ್ದಾರೆ.

ಭದೌರಿಯಾ ಕಳೆದ ತಿಂಗಳು ಭಾರತೀಯ ವಾಯುಸೇನೆಯ 26 ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು,

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)