varthabharthi

ಅಂತಾರಾಷ್ಟ್ರೀಯ

45 ನಿಮಿಷಗಳಲ್ಲಿ ಅಬುದಾಭಿಯಿಂದ ರಿಯಾದ್ ಗೆ !

ವಾರ್ತಾ ಭಾರತಿ : 8 Oct, 2019

ದುಬೈ : ಸಂಯುಕ್ತ ಅರಬ್ ಸಂಸ್ಥಾನ ಹಾಗೂ ಭಾರತದಲ್ಲಿ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುತ್ತಿರುವ ವರ್ಜಿನ್ ಹೈಪರ್‍ಲೂಪ್ ಒನ್ ಎಂಬ ಕಂಪೆನಿ ಇದೀಗ ಗಲ್ಫ್ ರಾಷ್ಟ್ರಗಳು ಹಾಗೂ ದುಬೈಯ ಕೆಲ ಪ್ರದೇಶಗಳ ನಡುವೆ ಹೈಪರ್ ಲೂಪ್ ಸಂಪರ್ಕ ಕಲ್ಪಿಸಿ ಸಂಚಾರ ಸಮಯ ಕಡಿಮೆಗೊಳಿಸಲಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಬುದಾಭಿಯಿಂದ ರಿಯಾದ್ ಗೆ ಕೇವಲ 45 ನಿಮಿಷಗಳಲ್ಲಿ ಹಾಗೂ ದುಬೈಯಿಂದ ಅಬುದಾಭಿಗೆ 11 ನಿಮಿಷಗಳಲ್ಲಿ ಸಂಚರಿಸಲು ಈ ಹೊಸ ಸಾರಿಗೆ ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ  ಎಂದು  ವರ್ಜಿನ್ ಹೈಪರ್ ಲೂಪ್ ಒನ್ ಸಂಸ್ಥೆಯ ಮಧ್ಯ ಪೂರ್ವ ಹಾಗೂ ಭಾರತ ವಿಭಾಗದ ಆಡಳಿತ ನಿರ್ದೇಶಕ ಹರ್ಜ್ ದಲಿವಾಲ್ ಹೇಳಿದ್ದಾರೆ.

ದುಬೈ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಆರಂಭಗೊಂಡ 'ಗಿಟೆಕ್ಸ್ ಟೆಕ್ನಾಲಜಿ ವೀಕ್' ಸಂದರ್ಭ ಅವರು ಮೇಲಿನ ಮಾಹಿತಿ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)