varthabharthi

ಕ್ರೀಡೆ

ಝಹೀರ್ ಖಾನ್‍ ಗೆ 'ಅಗೌರವ' ತೋರಿಸಿದ ಆರೋಪ: ಹಾರ್ದಿಕ್ ಪಾಂಡ್ಯಗೆ ಛೀಮಾರಿ ಹಾಕಿದ ಟ್ವಿಟರಿಗರು

ವಾರ್ತಾ ಭಾರತಿ : 8 Oct, 2019

ಹೊಸದಿಲ್ಲಿ, ಅ.8: ಟೀಂ ಇಂಡಿಯಾ ತಂಡದ ಮಾಜಿ ಬೌಲರ್ ಝಹೀರ್ ಖಾನ್  ಅವರು ಸೋಮವಾರ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಸಂದರ್ಭ ಹಲವು ಮಂದಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಅವರಿಗೆ ಟ್ವೀಟ್ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ. ಆದರೆ  ಭಾರತದ ಬೌಲರ್ ಹಾರ್ದಿಕ್ ಪಾಂಡ್ಯ ಅವರು ಝಹೀರ್ ಖಾನ್ ಗೆ ಹುಟ್ಟ ಹುಬ್ಬದ ಶುಭಾಶಯ ಸಲ್ಲಿಸಿ ವಿವಾದಕ್ಕೊಳಗಾಗಿದ್ದಾರೆ.

ಇತ್ತೀಚೆಗಷ್ಟೇ ಕೆಳ ಬೆನ್ನಿನ ಶಸ್ತ್ರಕ್ರಿಯೆಗೊಳಗಾಗಿ ಇದೀಗ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ತಮ್ಮ ಟ್ವೀಟ್ ನಲ್ಲಿ ``ಹ್ಯಾಪಿ ಬರ್ತ್ ಡೇ ಝ್ಯಾಕ್... ಹೋಪ್ ಯು ಸ್ಮ್ಯಾಶ್ ಇಟ್ ಔಟ್ ಆಫ್ ದಿ ಪಾರ್ಕ್ ಲೈಕ್ ಐ ಡಿಡ್ ಇಟ್ ಹಿಯರ್''(ಹುಟ್ಟು ಹಬ್ಬದ ಶುಭಾಶಯಗಳು ಝ್ಯಾಕ್....ನಾನಿಲ್ಲಿ ಮಾಡಿದಂತೆ ನೀವು ಕೂಡ ಮೈದಾನದ ಹೊರಗೆ ಚೆಂಡನ್ನು ಹೊರಗಟ್ಟುತ್ತೀರಿ ಎಂದು ನಂಬಿದ್ದೇನೆ''  ಎಂದು ಬರೆದು ಒಂದು ವೀಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಝಹೀರ್ ಖಾನ್ ಬೌಲಿಂಗ್ ನಲ್ಲಿ ಪಾಂಡ್ಯಾ ಸಿಕ್ಸರ್ ಸಿಡಿಸುವ ದೃಶ್ಯವಿದೆ.  ಕ್ರಿಕೆಟ್ ಅಭಿಮಾನಿಗಳು ಪಾಂಡ್ಯರ ಈ ಟ್ವೀಟ್ ನಿಂದ ಸಿಟ್ಟಾಗಿದ್ದಾರೆ. ಅವರು ತಮ್ಮ ಈ ಟ್ವೀಟ್ ಮೂಲಕ ಹಿರಿಯ ಆಟಗಾರನಿಗೆ ಅಗೌರವ ತೋರಿಸಿದ್ದಾರೆ ಹಾಗೂ ತಮ್ಮ `ದರ್ಜೆ' ಏನೆಂದು ತೋರಿಸಿದ್ದಾರೆ ಎಂದು ಹಲವರು ಪಾಂಡ್ಯ ವಿರುದ್ಧ ಕಿಡಿಕಾರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)