varthabharthi

ಕರ್ನಾಟಕ

ಮುಂದಿನ ವರ್ಷವೂ ನಮ್ಮದೇ ಬಿಜೆಪಿ ಸರಕಾರ ದಸರಾ ಆಚರಣೆ ಮಾಡಲಿದೆ: ಸಚಿವ ಸಿ.ಟಿ. ರವಿ

ವಾರ್ತಾ ಭಾರತಿ : 8 Oct, 2019

ಮೈಸೂರು,ಅ.8: ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರವಾಸೋದ್ಯಮ ಸಚಿವ ಸಿಟಿ ರವಿ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಮೈಸೂರು ನವವಧುವಿನಂತೆ ಕಂಗೊಳಿಸುತ್ತಿದೆ. ಪ್ರವಾಸಿಗರನ್ನು ಮೈಸೂರು ಕೈಬೀಸಿ ಕರೆಯುತ್ತಿದೆ. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಮೂಡಿಬರುತ್ತಿದೆ. ಮುಂದಿನ ವರ್ಷವೂ ನಮ್ಮದೇ ಬಿಜೆಪಿ ಸರ್ಕಾರ ದಸರಾ ಆಚರಣೆ ಮಾಡಲಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದರು.

ಪ್ರವಾಸಿಗರ ಸಂಖ್ಯೆ ಈ ಬಾರಿ ಹೆಚ್ಚಳವಾಗಿದೆ. ಪ್ರವಾಸಿತಾಣ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಜನ ಭೇಟಿ ನೀಡಿದ್ದಾರೆ. ಕೆ ಆರ್ ಎಸ್, ಅರಮನೆ, ಮೃಗಾಲಯ ಸೇರಿದಂತೆ ಇತರೆ ತಾಣಗಳ ವರದಿ ಸದ್ಯದಲ್ಲೇ ಬರಲಿದೆ ಎಂದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)