varthabharthi

ರಾಷ್ಟ್ರೀಯ

‘ಭಾರತ್ ಮಾತಾ ಕೀ ಜೈ’ ಎನ್ನದವರ ಮತಕ್ಕೆ ಬೆಲೆಯಿಲ್ಲ ಎಂದ ಬಿಜೆಪಿ ಅಭ್ಯರ್ಥಿ !

ವಾರ್ತಾ ಭಾರತಿ : 8 Oct, 2019

ಹೊಸದಿಲ್ಲಿ, ಅ.7: ‘ಭಾರತ್ ಮಾತಾ ಕೀ ಜೈ’ ಎನ್ನದವರ ವೋಟಿಗೆ ಯಾವುದೇ ಮೌಲ್ಯವಿಲ್ಲ ಎಂದು ಹರ್ಯಾಣದ ಬಿಜೆಪಿ ಅಭ್ಯರ್ಥಿ ಸೋನಾಲಿ ಪೋಗಟ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ವೀಡಿಯೊ ಈಗ ವೈರಲ್ ಆಗಿದೆ.

ಮಾಜಿ ನಟಿ, ಟಿಕ್‌ಟಾಕ್‌ನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವ ಸೋನಾಲಿ ಅದಾಮ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕುಲ್‌ದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದಾರೆ. ಹರ್ಯಾಣದ ಬಲ್ಸಾಮಂಡ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭ ಅವರು ‘ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುವಂತೆ ಗ್ರಾಮಸ್ಥರನ್ನು ಕೋರಿದ್ದಾರೆ. ಆದರೆ ಕೆಲವರು ಇದಕ್ಕೆ ಪ್ರತಿಕ್ರಿಯಿಸದಿದ್ದಾಗ ಅವರ ವಿರುದ್ಧ ಹರಿಹಾಯ್ದಿದ್ದಾರೆ ಎಂದು ವರದಿಯಾಗಿದೆ. “ನೀವೆಲ್ಲಾ ಪಾಕಿಸ್ತಾನದಿಂದ ಬಂದವರಾ? ನಿಮಗೆ ನಾಚಿಕೆಯಾಗಬೇಕು. ನೀವು ಭಾರತೀಯರಾಗಿದ್ದರೆ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿ” ಎಂದು ಸೋನಾಲಿ ಏರುಧ್ವನಿಯಲ್ಲಿ ಗದರುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

 “ಆದರೂ ಕೆಲವರು ಸುಮ್ಮನಿದ್ದರು. ನಿಮ್ಮಂತಹ ಭಾರತೀಯರೂ ಇದ್ದಾರಲ್ಲ ಎಂಬುದನ್ನು ನೆನೆಸಿಕೊಂಡರೇ ನಾಚಿಕೆಗೆಯಾಗುತ್ತದೆ. ಕ್ಷುಲ್ಲಕ ರಾಜಕೀಯಕ್ಕಾಗಿ ದೇಶಕ್ಕೆ ಜೈಕಾರ ಹೇಳಲು ಒಪ್ಪದವರ, ಭಾರತ್ ಮಾತಾ ಕೀ ಜೈ ಎನ್ನದವರ ವೋಟಿಗೆ ಯಾವುದೇ ಮೌಲ್ಯವಿಲ್ಲ” ಎಂದು ಸೋನಾಲಿ ಹೇಳಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)