varthabharthi

ಕರಾವಳಿ

‘ಸೈರ ನರಸಿಂಹ ರೆಡ್ಡಿ’ ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗ್ರಹಿಸಿ ಅಭಿಯಾನ

ವಾರ್ತಾ ಭಾರತಿ : 8 Oct, 2019

ಉಡುಪಿ, ಅ.8: ಚಿರಂಜೀವಿ ಅಭಿನಯದ ತೆಲುಗು ಭಾಷೆಯ ‘ಸೈರ ನರಸಿಂಹ ರೆಡ್ಡಿ’ ಚಿತ್ರದ ಕನ್ನಡ ಅವತರಣಿಕೆ ಇದ್ದರೂ ತೆಲುಗು ಭಾಷೆಯ ಚಿತ್ರವನ್ನು ಕರಾವಳಿ ಜಿಲ್ಲೆಯ ಪ್ರೇಕ್ಷಕರ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿ ಬನವಾಸಿ ಬಳಗ, ಆ ಚಿತ್ರವನ್ನು ಕನ್ನಡ ಭಾಷೆಯಲ್ಲೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಾವಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ.

ಈಗಾಗಲೆ ರಾಜ್ಯದ ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆಗೊಳಿಸಲಾಗಿದೆ. ಆದರೆ ತೆಲುಗು ಭಾಷಿಕರಿಲ್ಲದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ತೆಲುಗು ಭಾಷೆಯಲ್ಲೆ ಬಿಡುಗಡೆ ಗೊಳಿಸಿರುವುದು ಅನ್ಯಾಯ ಎಂದು ಬನವಾಸಿ ಬಳಗದ ಡಬ್ಬಿಂಗ್ ಹೋರಾಟಗಾರ ನವೀನ್ ಹೆಗ್ಡೆ ಹಕ್ಲಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)