varthabharthi

ಕರಾವಳಿ

ಕಥೋಲಿಕ್ ಸಭಾ ಮೂಡುಬಿದಿರೆ ವಲಯ ಕ್ರೀಡೋತ್ಸವ

ವಾರ್ತಾ ಭಾರತಿ : 8 Oct, 2019

ಮೂಡುಬಿದಿರೆ, ಅ. 8: ಕ್ರೀಡಾಕೂಟಗಳಿಂದ ಕ್ರೀಡಾ ಮನೋಭಾವನೆ ಹೆಚ್ಚುವ ಜತೆಗೆ ಸಮುದಾಯದಲ್ಲಿ ಒಗ್ಗಟ್ಟು, ಸಂತಸದ ವಾತಾವರಣ ಮೂಡಲು ಸಾಧ್ಯ' ಎಂದು ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ರೆ.ಫಾ. ಪಾವ್ಲ್ ಸಿಕ್ವೇರ ಹೇಳಿದರು.

ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ 40ನೇ ವರ್ಷದ ಸಂಭ್ರಮದಂಗವಾಗಿ ಕಥೋಲಿಕ್ ಸಭಾ ಮೂಡುಬಿದಿರೆ ವಲಯ ಮತ್ತು ಕಥೋಲಿಕ್ ಸಭಾ ತಾಕೊಡೆ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ ಹೊಂದಿರುವ ಕ್ರೀಡಾಂಗಣ ದಲ್ಲಿ  ಮಂಗಳವಾರ  ನಡೆದ ಕಥೋಲಿಕ್ ಸಭಾ  ಮೂಡುಬಿದಿರೆ ವಲಯ ಮಟ್ಟದ  ಕ್ರೀಡೋತ್ಸವ-2019ನ್ನು ಉದ್ಘಾಟಿಸಿ ಆಶೀರ್ವಚನವಿತ್ತು, `

ಪೋಪ್ ಫ್ರಾನ್ಸಿಸ್ ಅವರು ಈ ವರ್ಷವನ್ನು ಯುವಕರ ವರ್ಷ ಎಂದು ಘೋಷಿಸಿದ್ದು  ಈ ಹಿನ್ನೆಲೆಯಲ್ಲಿ  ಈ ಕ್ರೀಡೋತ್ಸವದ ಆಶಯ, ನಡೆಸಲಾ ಗುತ್ತಿರುವ ರೀತಿ ಮತ್ತು  ವ್ಯಕ್ತವಾಗುವ ಧನಾತ್ಮಕ ಪ್ರಭಾವ ಚೇತೋಹಾರಿ ಅಂಶಗಳಾಗಿವೆ' ಎಂದು ಹರ್ಷ ವ್ಯಕ್ತಪಡಿಸಿದರು.

ಕಥೋಲಿಕ್ ಸಭಾ ವಲಯಾಧ್ಯಕ್ಷ  ವಿಕ್ಟರ್ ಕಡಂದಲೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಅತಿಥಿಗಳಾಗಿ  ಪಾಲ್ಗೊಂಡ ಮಂಗಳೂರು ಪ್ರದೇಶ್ ಕಥೋಲಿಕ್ ಸಭಾ ಅಧ್ಯಕ್ಷ   ಪಾವ್ಲ್  ರೋಲಿ ಡಿ'ಕೋಸ್ತ  ಹಾಗೂ ತಾಕೊಡೆ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ರೋಶನ್ ಪಿರೇರಾ ಧ್ವಜಾರೋಹಣಗೈದರು. ಉದ್ಯಮಿ ವಿನ್ಸೆಂಟ್ ಕುಟಿನ್ಹೋ, ತಾಕೊಡೆ ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಫ್ರಾನ್ಸಿಸ್ ಮೆಂಡೋನ್ಸ ಮುಖ್ಯಅತಿಥಿಗಳಾಗಿದ್ದರು. ಕಥೋಲಿಕ್ ಸಭಾ ತಾಕೊಡೆ ಘಟಕಾಧ್ಯಕ್ಷ  ರೋಹಿತ್ ಕರ್ಡೋಜ ಸ್ವಾಗತಿಸಿದರು.

ಚಾರ್ಲ್ಸ್ ಕ್ರಾಸ್ತಾ ಮತ್ತು ಮಾರ್ಕ್ ಪಿಂಟೋ ತಾಕೊಡೆ ನಿರೂಪಿಸಿದರು. ವಲಯದ 11 ಕಥೋಲಿಕ್ ಸಭಾ ಘಟಕಗಳ 400ಕ್ಕೂ ಅಧಿಕ ಮಂದಿ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು . ಕಥೋಲಿಕ್ ಸಭಾ ಕೇಂದ್ರೀಯ ಮಟ್ಟದಲ್ಲಿ ನ. 17ರಂದು ಕ್ರೀಡೋತ್ಸವ ಜರಗಲಿದೆ ಎಂದು ಪ್ರಕಟಿಸಲಾಯಿತು. ವಿಲ್ಸನ್ ಪಿಂಟೋ ತಾಕೊಡೆ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)