varthabharthi

ಕರಾವಳಿ

ಮೊಟ್ಚೆತ್ತಡ್ಕದಲ್ಲಿ ರಕ್ತದಾನ ಶಿಬಿರ

ವಾರ್ತಾ ಭಾರತಿ : 8 Oct, 2019

ಮೊಟ್ಚೆತ್ತಡ್ಕ: ಫ್ರೆಂಡ್ಸ್ ಪುತ್ತೂರು ಸ್ಪೋರ್ಟ್ಸ್ ಕ್ಲಬ್ ಮೊಟ್ಟೆತ್ತಡ್ಕ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಟ್ಟೆತ್ತಡ್ಕದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ತೂರು ನಗರ ಸಭಾ ಸದಸ್ಯೆ ಶೈಲಾ ಪೈ ಅವರು ಜೀವನದಲ್ಲಿ ರಕ್ತದಾನ ಮಾಡಿದಾಗ ಸಿಗುವ ಸಂತೋಷ ಅದು ವರ್ಣಿಸಲಸಾಧ್ಯ ಮಾತ್ರವಲ್ಲ ಮನುಷ್ಯ ಮನಸ್ಸುಗಳಲ್ಲಿ ಸಂಪ್ರೀತಿಯನ್ನು ಹೆಚ್ಚಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಸ್ ಡಿ ಪಿ ಐ ಪುತ್ತೂರು ತಾಲೂಕು ಅಧ್ಯಕ್ಷರಾದ ಸಿದ್ದೀಕ್ ಕೆ ಎ ಅವರು ಮಾತನಾಡಿ ಸಂಘ- ಸಂಸ್ಥೆಗಳು ಕೇವಲ ಕ್ರೀಡೆ ಮನರಂಜನೆಗಳಿಗೆ ಮಾತ್ರ ಸೀಮಿತವಾಗದೆ ಇಂತಹ ಮೌಲ್ಯಯುತ ಸಾಮಾಜಿಕ ಸೇವೆಗಳಿಗೂ ಮುಂದಾಗ ಬೇಕೆಂದು ತಿಳಿಸಿದರು.

ಸನ್ಮಾನ

ಎನ್ ಎಫ್ ಸಿ ಹೆಲ್ಪಿಂಗ್ ಹ್ಯಾಂಡ್ಸ್ ಮೂಲಕ ಜಿಲ್ಲೆಯಾದ್ಯಂತ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಬಂದಿರುವ, ಸಾಮುದಾಯಿಕ ಸಮಸ್ಯೆಗಳಿಗೆ ಸಾಂತ್ವನಿಯಾಗಿರುವ ಮುಕ್ತಾರ್ ಎನ್ ಎಫ್ ಸಿ ಕುಂಬ್ರ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ರಕ್ತದಾನ ಶಿಬಿರವನ್ನು ನಗರ ಸಭಾ ಸದಸ್ಯೆ ಶೈಲಾ ಪೈ ಅವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಸದಸ್ಯರಾದ ರಮೇಶ್ ರೈ ,ಎಸ್ ಡಿ ಎಂ ಸಿ ಅಧ್ಯಕ್ಷ ಸದಾಶಿವ ,ಬ್ಲಡ್ ಡೋನರ್ಸ್ ಮಂಗಳೂರು  ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ , ಎಸ್ ಎಸ್ ಎಫ್ ಬ್ಲಡ್ ಸೈಬೋ ಇದರ ಹಾರಿಸ್ ಅಡ್ಕ , ಬಿಡಿಎಂ ಪ್ರಧಾನ ಕಾರ್ಯದರ್ಶಿಗಳಾದ ನವಾಝ್ ಕಲ್ಲರಕೋಡಿ, ಕಾರ್ಯ ನಿರ್ವಾಹಕರಾದ ಶಾಹುಲ್ ಹಮೀದ್ ಕಾಶಿಪಟ್ನಾ , ಸಲಾಂ ಚೊಂಬುಗುಡ್ಡೆ, ಇಮ್ರಾನ್ ಉಪ್ಪಿನಂಗಡಿ, ಫಾರೂಕ್ ಬಿಗ್ ಗ್ಯಾರೇಜ್, ಫಯಾಝ್ ಮೊಂಟೆಪದವು, ಝಹೀರ್ ಶಾಂತಿನಗರ ಈ ಸಂದರ್ಭ ಉಪಸ್ಥಿತರಿದ್ದರು.

ಫ್ರೆಂಡ್ಸ್ ಪುತ್ತೂರು ಸಂಸ್ಥೆಯ ಗೌರವಾಧ್ಯಕ್ಷ ಹನೀಫ್ ಪಿ ಎಂ ಅಧ್ಯಕ್ಷತೆ ವಹಿಸಿದ್ದರು. ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 60 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಫ್ರೆಂಡ್ಸ್ ಪುತ್ತೂರು ಇದರ ಕಾರ್ಯದರ್ಶಿ ಇಮ್ತಿಯಾಝ್ ಪರ್ಪುಂಜ ಸ್ವಾಗತಿಸಿ ರಿಯಾಝ್ ಮೊಟ್ಟೆತ್ತಡ್ಕ ವಂದಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯ ನಿರ್ವಾಹಕರಾದ ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)