varthabharthi

ರಾಷ್ಟ್ರೀಯ

ಎಎಚ್‌ಎ ಗೌರವ ವಿದೇಶಿ ಸದಸ್ಯ ಪ್ರಶಸ್ತಿಗೆ ರಾಮಚಂದ್ರ ಗುಹಾ ಆಯ್ಕೆ

ವಾರ್ತಾ ಭಾರತಿ : 8 Oct, 2019

ಹೊಸದಿಲ್ಲಿ,ಅ.8: ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರನ್ನು ಈ ವರ್ಷದ ಗೌರವ ವಿದೇಶಿ ಸದಸ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಅಮೆರಿಕನ್ ಹಿಸ್ಟಾರಿಕಲ್ ಅಸೋಸಿಯೇಷನ್ (ಎಎಚ್‌ಎ) ಪ್ರಕಟಿಸಿದೆ.

ಗುಹಾ ಅವರು ಜಾದೂನಾಥ ಸರ್ಕಾರ್ ಮತ್ತು ರೊಮಿಲಾ ಥಾಪರ್ ಅವರ ಬಳಿಕ 1886ರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುತ್ತಿರುವ ಮೂರನೇ ಭಾರತೀಯ ಇತಿಹಾಸ ತಜ್ಞರಾಗಿದ್ದಾರೆ.

 ತಮ್ಮ ದೇಶದಲ್ಲಿರುವ ಅಮೆರಿಕನ್ ವಿದ್ವಾಂಸರಿಗೆ ಜ್ಞಾನದಾನ ಮತ್ತು ನೆರವಿನಲ್ಲಿ ತಮ್ಮ ಅಸಾಧಾರಣ ಕೊಡುಗೆಗಾಗಿ ಅಮೆರಿಕದಿಂದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಇತಿಹಾಸ ತಜ್ಞರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಗುಹಾ ಜ.3ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

‘ ಎಎಚ್‌ಎ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನನ್ನ ಹೆಸರಿರುವುದು ನನಗೆ ಗೌರವವನ್ನುಂಟು ಮಾಡಿದೆ. ನನ್ನ ಪತ್ನಿ ಸುಜಾತಾ,ನನ್ನ ಗುರು ದಿ.ಅಂಜಾನ ಘೋಷ್ ಮತ್ತು ನನ್ನ ಮೊದಲ ಮತ್ತು ಅತ್ಯುತ್ತಮ ಸಂಪಾದಕ ಡಾ.ರುಕುನ್ ಆಡ್ವಾಣಿ ಅವರು ನನ್ನನ್ನು ವಿದ್ವಾಂಸನನ್ನಾಗಿಸಿದ್ದಾರೆ ’ ಎಂದು ಗುಹಾ ಮಂಗಳವಾರ ಟ್ವೀಟಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)