varthabharthi

ಕರ್ನಾಟಕ

ಸುಂಟಿಕೊಪ್ಪ: ಆಯುಧಪೂಜಾ ಸಮಾರಂಭ

ವಾರ್ತಾ ಭಾರತಿ : 8 Oct, 2019

ಸುಂಟಿಕೊಪ್ಪ: ಸುಂಟಿಕೊಪ್ಪ ಆಯುಧಪೂಜಾ ಕಾರ್ಯಕ್ರಮಗಳಿಗೆ ಸರಕಾರದ ವತಿಯಿಂದ ರೂ. 5 ಲಕ್ಷ ಅನುದಾನ ಒದಗಿಸುವ ಕುರಿತು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭರವಸೆ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ದೀಪಗಳಿಂದ ಅಲಂಕೃತ ವಾಹನ ಚಾಲಕರ ಸಂಘದ ಭವ್ಯ ವೇದಿಕೆಯಲ್ಲಿ ಸೋಮವಾರ ಸಂಜೆ 49ನೇ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಂಟಿಕೊಪ್ಪ ಅಭಿವೃದ್ಧಿಯ ಕುರಿತು ಸಾಕಷ್ಟು ಚಿಂತನೆ ಸಲ್ಲಿಸಿದ್ದು ಈಗಾಗಲೇ 10ಕೋಟಿ ಅನುದಾನವನ್ನು ಪಂಚಾಯಿತಿಗೆ ನೀಡಲಾಗಿದೆ. ರಸ್ತೆ ಆಗಲಿಕರಣದ ಹಿನ್ನಲೆಯಲ್ಲಿ ಮಾರುಕಟ್ಟೆ ಸ್ಥಳಾಂತರ ಹೊಸ ಮಾರುಕಟ್ಟೆಯ ನಿರ್ಮಾಣ ವಿಳಂಬವಾಗಿದೆ ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ ರೂ. 50 ಲಕ್ಷ ಅನುದಾನವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. 

ಪಕೃತಿ ವಿಕೋಪದ ಹಿನ್ನಲೆಯಲ್ಲಿ ಕಾಫಿ ಬೆಳೆಗಾರರು ಸೇರಿದಂತೆ ಯಾರ ಬಳಿಯಲ್ಲೂ ಹಣವಿಲ್ಲಾ ಅವರಲ್ಲಿ ಹಣವಿದ್ದರೆ ಎಲ್ಲಾ ಶೇಖರಣೆಯೂ ಹಂಚಿಕೆಯಾಗುವ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಅಭಿವೃದ್ಧಿ ಕಾಣುತ್ತದೆ ಮುಂದಿನ ವರ್ಷ 50ನೇ ವರ್ಷ ಆಚರಣೆಯಲ್ಲಿರುವ ಆಯುಧಪೂಜಾ ಸಮಾರಂಭ ಇನ್ನಷ್ಟು ಆಕರ್ಷಣಿಯವಾಗಿ ನಡೆಯಲೆಂದು ಅವರು ಹಾರೈಸಿದರು. 

ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ಹಾಸನ ಜಿಲ್ಲಾ ಗ್ರಾಹಕರ ವೇದಿಕೆಯ ಪರಿಹಾರ ಆಯೋಗದ ಅಧ್ಯಕ್ಷರಾದ ಎ.ಲೋಕೇಶ್ ಕುಮಾರ್ ಮಾತನಾಡಿ ಸುಂಟಿಕೊಪ್ಪ ಆಯುಧಪೂಜಾ ಸಂಭ್ರಮವು ತನ್ನ ಗತವೈಭವವನ್ನು ಮರಳಿ ಪಡೆಯಬೇಕೆಂದು ಆಶಿಸಿದರು. ಸ್ಥಬ್ಧಚಿತ್ರ ಅಂಗಡಿ ಅಲಂಕಾರ, ವಿವಿಧ ಸ್ಪರ್ದೆಗಳು ಕಾಣುತ್ತಿಲ್ಲ ಆದರೆ ಮುಂದಿನ ವರ್ಷ 50ನೇ ವರ್ಷದ ಸಂಭ್ರಮವನ್ನು ಆದ್ದೂರಿಯಿಂದ ಮಾಡಬೇಕೆಂದು ಅವರು ಕರೆನೀಡಿದರು. 

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಬೇಡ. ಸುಂಟಿಕೊಪ್ಪ ಒಂದು ಮಾದರಿ ಪಟ್ಟಣವಾಗಿ ಬೆಳೆಯಬೇಕು ಈಗಾಗಲೇ ಸುಂಟಿಕೊಪ್ಪ ವಿಸ್ತರಣೆ ವಿಚಾರದಲ್ಲಿ 9 ಎಕರೆ ಜಾಗವನ್ನು ಗುರಿತಿಸಲಾಗಿದೆ. ಇದರ ಬಗ್ಗೆ ಶಾಸಕರು ಕೇಂದ್ರ ಮತ್ತು ರಾಜ್ಯದಿಂದ ವಿಶೇಷ ಅನುದಾನ ತರುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದ ಅವರು ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಬದುಕಲ್ಲಿ ಎದುರಾಗುವ ಕಷ್ಟ ಸುಖಗಳನ್ನು ಎದುರಿಸಬೇಕೆಂದು ಅವರು ಕರೆ ನೀಡಿದರಲ್ಲದೆ, ವಿಜಯದಶಮಿ ಎಂಬುವುದು ಮನುಷ್ಯನ ಬಹಿರಂಗ ಮತ್ತು ಅಂತರಂಗದ ಶತ್ರುಗಳನ್ನು ಗೆಲುವುದಕ್ಕೆ ಸಂಕಲ್ಪ ಮಾಡುವ ದಿನವೂ ಆಗಿದೆ ಎಂದು ಅವರು ವಿಶ್ಲೇಷಿದರು. 

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ ಸುಂಟಿಕೊಪ್ಪದಲ್ಲಿ ಮತ್ತೆ ಆಧ್ದೂರಿ ಮತ್ತು ವರ್ಣರಂಜಿತ ಆಯುಧಪೂಜಾ ಸಮಾರಂಭ ನಡೆಯುವಂತಾಗಬೇಕೆಂದು ಆಶಿಸಿದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ ಮುಂದಿನ ವರ್ಷದ 50 ವಾರ್ಷಿಕ ಸಂಬ್ರಮಕ್ಕೆ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಲಿ ಅತಿವೃಷ್ಠಿ ಅನಾವೃಷ್ಠಿಗಳು ಸಾಕಷ್ಟು ಕಷ್ಟ ನಷ್ಟಗಳನು ಉಂಟುಮಾಡಿದೆ ಆಯುಧಪೂಜೆ ಮತ್ತು ವಿಜಯದಶಮಿ ನಮ್ಮ ಪದ್ಧತಿ ಪರಂಪರೆ ಆಚಾರ ವಿಚಾರ ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತಿದ್ದು ತಾಯಿ ಚಾಮುಂಡೇಶ್ವರಿಯ ಕೃಪೆ ಎಲ್ಲಾರ ಮೇಲಿರಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೀಡುವಂತಾಗಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಮತ್ತು ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿದರು. 

ಗ್ರಾ.ಪಂ. ಮಾಜಿ ಅಧ್ಯಕ್ಷ ಮತ್ತು ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ.ಉಸ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಊರಿನ ಅಭಿವೃದ್ಧಿಯ ಬಗ್ಗೆ ಬೇಡಿಕೆಗಳ ಮನವಿಯನ್ನು ಆರ್ಪಿಸಿದರು. 

ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಕುಮುಧಾ ಧರ್ಮಪ್ಪ, ಅನೂಪ್ ಮಾದಪ್ಪ, ಕುಶಾಲನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮೊೈದು, ಉದ್ಯಮಿ ಟಿ.ಆರ್. ಮುನಿಯಪ್ಪನ್, ವಿಲಿಯಂ ಮೇನೆಜೇಸ್, ಕೆ.ಪಿ.ಜಗನ್ನಾಥ್, ಮಾಗಲು ವಸಂತ, ಚಾಲಕರ ಸಂಘದ ಅಧ್ಯಕ್ಷ ಬಿ.ಎಂ.ಪೂವಪ್ಪ,ಗೌರವಧ್ಯಕ್ಷ ಎ.ಹಂಸ (ಅಚ್ಚುಪ್ಪ), ಉಪಾಧ್ಯಕ್ಷ ಬಿ.ಎ.ಕೃಷ್ಣಪ್ಪ, ಕಾರ್ಯದರ್ಶಿ ದೇವಯ್ಯ, ಖಜಾಂಜಿ ಕೆ.ಎಸ್.ಸುರೇಶ್, ಸಹಕಾರ್ಯದರ್ಶಿ ವಿ.ಆರ್.ಸುರೇಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

49ನೇ ಆಯುಧಪೂಜಾ ಸಮಾರಂಭದ ಸರಳ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಕುಶಾಲನಗರದ ಮಂಜು ಭಾರ್ಗವಿ ತಂಡ ಹಾಗೂ ಸ್ಥಳೀಯ ಕಲಾವಿದರ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಕಲಾ ಪ್ರತಿಭೆಗಳ ಜನಮನ ಸೂರೆಗೊಳಿಸಿತ್ತು.

ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾದ ಮಡಿಕೇರಿ ವೃತ್ತ ನಿರೀಕ್ಷಕರಾದ ಅನೂಫ್ ಮಾದಪ್ಪ, ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ನಿವೃತ್ತ ಯೋಧರಾದ ವಿಲಿಯಂ ಮೇನೆಜೇಸ್, ಕೆ.ಪಿ.ಜಗನ್ನಾಥ್, ನಿವೃತ್ತ ಯೋಧರಾದ ಮಾಗಲು ವಸಂತ ಅವರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಫಲ ತಾಂಬೂಲ ನೀಡಿ ಗೌರವಿಸಿದರು. 

ಸಮಾರಂಭದ ಮೊದಲಿಗೆ ಮಂಜು ಭಾರ್ಗವಿ ತಂಡದವರು ಪ್ರಾರ್ಥಿಸಿ, ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ.ಉಸ್ಮಾನ್ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿ ವಂದಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)