varthabharthi

ಕ್ರೀಡೆ

ಅರ್ಜೆಂಟೀನದ ಫುಟ್ಬಾಲ್ ಆಟಗಾರ ಎಸ್ಪರ್ಸನ್ ಕಟ್ಟಡದಿಂದ ಬಿದ್ದು ಮೃತ್ಯು

ವಾರ್ತಾ ಭಾರತಿ : 9 Oct, 2019

ಬ್ಯುನಸ್‌ಐರಿಸ್, ಅ.8: ಅರ್ಜೆಂಟೀನದ ಫುಟ್ಬಾಲ್ ಆಟಗಾರ ಎರೊಕ್ವಿಯೆಲ್ ಎಸ್ಪರ್ಸನ್ ಬ್ಯುನಸ್‌ಐರಿಸ್‌ನ ಕಟ್ಟಡವೊಂದರ ಆರನೇ ಮಾಳಿಗೆಯಿಂದ ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ 23 ವಯಸ್ಸಾಗಿತ್ತು.

ಎಸ್ಪರ್ಸನ್ ಅವರ ಬಾಲ್ಯದ ಫುಟ್ಬಾಲ್ ಕ್ಲಬ್ ಅಟ್ಲೆಟಿಕೊ ಆಲ್ ಬಾಯ್ಸೆ ಹೇಳಿಕೆಯೊಂದರ ಮೂಲಕ ನಿಧನವನ್ನು ಖಚಿತಪಡಿಸಿದೆ. ಈ ಘಟನೆಯಿಂದ ನಮಗೆ ತೀವ್ರ ದುಃಖವಾಗಿದೆ ಎಂದು ಹೇಳಿದೆ.

ಬಾಲ್ಕನಿಯ ಒಂದು ಭಾಗ ಕುಸಿದುಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಿೆ.

ಎಸ್ಪರ್ಸನ್ ಈ ಹಿಂದೆ ಮೆಕ್ಸಿಕೊ ಅಟ್ಲಾಂಟೆ ಹಾಗೂ ಬ್ರೆಝಿಲ್‌ನ ಎದುರಾಳಿ ಗ್ರಿಮಿಯೊ ಹಾಗೂ ಇಂಟರ್‌ನ್ಯಾಶನಲ್ ಪರ ಮಿಡ್ ಫೀಲ್ಡರ್ ಆಗಿ ಆಡಿದ್ದರು. ಮೇನಲ್ಲಿ ಅಟ್ಲಾಂಟೆ ತಂಡವನ್ನು ತೊರೆದ ಬಳಿಕ ಯಾವುದೇ ತಂಡದೊಂದಿಗೆ ಸಹಿ ಹಾಕಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)