varthabharthi

ಕ್ರೀಡೆ

ಡೆನ್ಮಾರ್ಕ್ ಓಪನ್‌ಗೆ ಸರಿಯಾದ ಸಮಯಕ್ಕೆ ವೀಸಾ ಪಡೆಯುವ ವಿಶ್ವಾಸ ಇದೆ: ಸೈನಾ

ವಾರ್ತಾ ಭಾರತಿ : 9 Oct, 2019

ಹೊಸದಿಲ್ಲಿ, ಅ.8: ಮುಂದಿನ ತಿಂಗಳು ನಡೆಯಲಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ತನ್ನ ವೀಸಾ ಅರ್ಜಿಯ ಪ್ರಕ್ರಿಯೆ ನಡೆಯುತ್ತಿದ್ದು, ಸರಿಯಾದ ಸಮಯಕ್ಕೆ ವೀಸಾ ಪಡೆಯುವ ವಿಶ್ವಾಸವಿದೆ ಎಂದು ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.

 ಬಿಡಬ್ಲುಎಫ್ ಸೂಪರ್ 750 ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ತಾನು ವೀಸಾ ಸಮಸ್ಯೆ ಎದುರಿಸುತ್ತಿದ್ದೇನೆ ಎಂದು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ಸೋಮವಾರ ಟ್ವೀಟ್ ಮಾಡಿದ್ದರು.

ತನ್ನ ಸಮಸ್ಯೆ ನಿವಾರಣೆಗೆ ವಿದೇಶಾಂಗ ವ್ಯವಹಾರ ಸಚಿವಾಲಯದ ನೆರವು ನಿರೀಕ್ಷಿಸುತ್ತಿದ್ದೇನೆ ಎಂದು ಸೈನಾ ಹೇಳಿದ್ದರು.

 ಡೆನ್ಮಾರ್ಕ್ ಓಪನ್ ಒಡೆನ್ಸ್‌ನಲ್ಲಿ ಅ.15ರಿಂದ 20ರ ತನಕ ನಡೆಯಲಿದೆ.

29ರ ಹರೆಯದ ಸೈನಾ ಕಳೆದ ವರ್ಷ ಡೆನ್ಮಾರ್ಕ್ ಓಪನ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ತೈ ಝು-ಯಿಂಗ್ ವಿರುದ್ಧ ಸೋಲನುಭವಿಸಿ ರನ್ನರ್ಸ್ ಅಪ್ ಸ್ಥಾನ ಪಡೆದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)