varthabharthi

ರಾಷ್ಟ್ರೀಯ

ದಸರಾ ಕಾರ್ಯಕ್ರಮದಲ್ಲಿ ಜೆಡಿಯು-ಬಿಜೆಪಿ ಭಿನ್ನಮತ ಬಹಿರಂಗ

ವಾರ್ತಾ ಭಾರತಿ : 9 Oct, 2019

ಪಾಟ್ನಾ, ಅ.9: ಬಿಹಾರ ಮೈತ್ರಿಕೂಟದ ಭಾಗವಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ಮಧ್ಯೆ ಇರುವ ಭಾರೀ ಭಿನ್ನಮತಕ್ಕೆ ಪಾಟ್ನಾ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮ ಸಾಕ್ಷಿಯಾಯಿತು.

ಬಿಜೆಪಿ ನಾಯಕರು ಈ ಕಾರ್ಯಕ್ರಮದಿಂದ ದೂರವೇ ಉಳಿದು ತಮ್ಮ ಭಿನ್ನಾಭಿಪ್ರಾಯವನ್ನು ತೋರಿಸಿದರು. ಸಾಂಪ್ರದಾಯಿಕವಾಗಿ ನವರಾತ್ರಿ ಸಮಯದಲ್ಲಿ ನಡೆಯುವ ರಾಮಲೀಲಾ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷದ ನಾಯಕರು ಭಾಗವಹಿಸುತ್ತಾರೆ.

 ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್, ಬಿಹಾರ ಸ್ಪೀಕರ್ ವಿಜಯ್ ಚೌಧರಿ ಹಾಗೂ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ ಹಾಜರಿದ್ದರು. ಈ ಕಾರ್ಯಕ್ರಮವನ್ನು ಖಾಸಗಿ ಸಮಿತಿಯೊಂದು ಆಯೋಜಿಸಿತ್ತು.

ಬಿಜೆಪಿ ನಾಯಕರು ಇತ್ತೀಚೆಗೆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಪ್ರವಾಹಕ್ಕೆ ಸಂಬಂಧಿಸಿ ಸಿಎಂ ನಿತೀಶ್ ಕುಮಾರ್‌ರನ್ನು ಟೀಕಿಸಿದ್ದರು. ಬಿಜೆಪಿಯ ಒಂದು ಬಣ ನಿತೀಶ್‌ಕುಮಾರ್‌ರನ್ನು ಎನ್‌ಡಿಎ ಮೈತ್ರಿಕೂಟದಿಂದ ದೂರ ಇಡಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)