varthabharthi

ರಾಷ್ಟ್ರೀಯ

ಹರ್ಯಾಣ ಚುನಾವಣೆ: ಮಾಜಿ ಕಾಂಗ್ರೆಸ್ ನಾಯಕ ಸಂಪತ್ ಸಿಂಗ್ ಬಿಜೆಪಿಗೆ

ವಾರ್ತಾ ಭಾರತಿ : 9 Oct, 2019

ಚಂಡೀಗಢ, ಅ.9: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಆರು ಬಾರಿಯ ಶಾಸಕ ಸಂಪತ್ ಸಿಂಗ್ ಬುಧವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ.

ಮೆಹಾಮ್‌ಗೆ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಶಾ ಮಾತನಾಡಲಿದ್ದು, ಈ ವೇಳೆ ಸಿಂಗ್ ಬಿಜೆಪಿ ಸೇರಲಿದ್ದಾರೆ.

ಮಾಜಿ ರಾಜ್ಯ ಗೃಹ ಹಾಗೂ ವಿತ್ತ ಸಚಿವರಾಗಿದ್ದ ಸಂಪತ್ ಸಿಂಗ್‌ಗೆ ಅ.21ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಲ್ವಾ ಹಾಗೂ ಅದಾಂಪುರ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ನಿರಾಕರಿಸಿದ ಬಳಿಕ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದಾರೆ.

 ತನಗೆ ಅ.21ರಂದು ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಏಕೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಮಾಹಿತಿಯನ್ನು ನೀಡಲಾಗಿಲ್ಲ. ಪಕ್ಷದಲ್ಲಿ ನನಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿರುವ ಹಿರಿಯ ನಾಯಕ ಸಂಪತ್ ಸಿಂಗ್ ಸೋಮವಾರ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)