varthabharthi

ಕರಾವಳಿ

​ಅ.10: ‘ಕಾರಂತ ಹುಟ್ಟುಹಬ್ಬ’ ಕಾರ್ಯಕ್ರಮ

ವಾರ್ತಾ ಭಾರತಿ : 9 Oct, 2019

ಮಂಗಳೂರು, ಅ.9: ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ 118ನೇ ಹುಟ್ಟುಹಬ್ಬ ಕಾರ್ಯಕ್ರಮವು ಅ.10ರಂದು ನಗರದ ಡಾನ್ ಬಾಸ್ಕೋಹಾಲ್‌ನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಜರುಗಲಿದೆ.

ರಾತ್ರಿ 8ಕ್ಕೆ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ‘ಮಕ್ಕಳ ಮೇಳ ಸಾಲಿಗ್ರಾಮ’ದ ಸಂಚಾಲಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಚ್. ಶ್ರೀಧರ ಹಂದೆಯವರಿಗೆ ‘ಕಾರಂತ ಪ್ರಶಸ್ತಿ' ಹಾಗೂ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಇಂಟರ್‌ನ್ಯಾಷನಲ್ ಬೆಂಚ್-ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 83 ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗಳಿಸಿರುವ ಮಂಗಳೂರಿನ ರಿತ್ವಿಕ್ ಅಲೆವುರಾಯ ಕೆ.ವಿ. ಅವರಿಗೆ ‘ಕಾರಂತ ಹುಟ್ಟುಹಬ್ಬ ಸಾಧನಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಸಂಜೆ 5ರಿಂದ ಶಶಿಕಾಂತ ಶೆಟ್ಟಿ ನೇತೃತ್ವದ ಶ್ರೀ ದೇವಿ ಲಲಿತ ಕಲಾವೃಂದ ಕಾರ್ಕಳ ಇವರಿಂದ ‘ಚಕ್ರ ಚಂಡಿಕ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)