varthabharthi

ಕರಾವಳಿ

ವಿಜಯದಶಮಿ ಸಂಗೀತೋತ್ಸವ: ಸತತ 13 ಗಂಟೆಗಳ ಸಂಗೀತ ರಸಧಾರೆ

ವಾರ್ತಾ ಭಾರತಿ : 9 Oct, 2019

ಪರ್ಕಳ, ಅ.9: ವಿಜಯದಶಮಿಯ ಸಂದರ್ಭದಲ್ಲಿ ಪರ್ಕಳದ ಸರಿಗಮ ಭಾರತಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ಸಂಗೀತೋತ್ಸವವನ್ನು ವಿಧಾನಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಂಪರೆಯ ಆಳಕ್ಕೆ ಇಳಿದು ಅದರ ಸತ್ವಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಮುಂದಿನ ಜನಾಂಗಕ್ಕೆ ನಮ್ಮ ಪರಂಪರೆಯನ್ನು ವರ್ಗಾಯಿ ಸುವ ಕೆಲಸ ಸಂಗೀತ ಶಿಕ್ಷಣದ ಮೂಲಕ ಸಾಧ್ಯ. ಸರಿಗಮ ಭಾರತಿ ಸಂಸ್ಥೆ ಈ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಹಿರಿಯರಾದ ನಾಡೋಜ ಕೆ.ಪಿ.ರಾವ್,ಉದ್ಯಮಿ ಮಂಜುನಾಥ ಉಪಾಧ್ಯ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಪ್ರಾಧ್ಯಾಪಕ ಪ್ರೊ.ಬಾಲಕೃಷ್ಣ ಮುದ್ದೋಡಿ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ಕಲಾವಿದ ಕೆ.ಆರ್.ರಾಘವೇಂದ್ರ ಆಚಾರ್ಯರನ್ನು ಸನ್ಮಾನಿಸಲಾಯಿತು.ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಉಮಾಶಂಕರಿ ಮತ್ತು ಡಾ.ಉದಯಶಂಕರ್ ಉಪಸ್ಥಿತರಿದ್ದರು.

ಸಂಗೀತೋತ್ಸವದ ಅಂಗವಾಗಿ ಸತತ 13 ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪುಟಾಣಿಗಳಿಂದ ಪಿಳ್ಳಾರಿ ಗೀತೆಗಳು, ತ್ಯಾಗರಾಜರ ಪಂಚರತ್ನ ಗೋಷ್ಟಿ ಗಾಯನ, ಶ್ರೀ ದೇವಿಯ ನವಾವರಣ ಕೃತಿಗಳ ಗಾಯನ ನಡೆಯಿತು.

ಹಿರಿಯ ಕಲಾವಿದರಾದ ಮೈಸೂರಿನ ಎನ್.ಆರ್.ಪ್ರಶಾಂತ್ ಅವರ ಸಂಗೀತ ಕಚೇರಿ, ರಂಜಿತಾ ಅವಿನಾಶ್ ಅವರ ಭರತನಾಟ್ಯ ಸೇರಿದಂತೆ 14 ಮಂದಿ ಯುವ ಪ್ರತಿಭಾನ್ವಿತ ಕಲಾವಿದರಿಂದ ವಿವಿಧ ಪ್ರಕಾರದ ಸಂಗೀತ ಕಾರ್ಯಕ್ರಮ ಗಳು ಈ ಸಂದರ್ಭದಲ್ಲಿ ನಡೆದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)