varthabharthi

ಕರಾವಳಿ

ಅ. 19ರಿಂದ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ

ವಾರ್ತಾ ಭಾರತಿ : 9 Oct, 2019

ಉಡುಪಿ, ಅ.9: ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸುತ್ತಿರುವ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ-2019 ಈ ಬಾರಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅ.19ರಿಂದ 25ರವರೆಗೆ ನಡೆಯಲಿದೆ.

ಸಪ್ತಾಹವನ್ನು ಅ.19ರ ಸಂಜೆ 6:30ಕ್ಕೆ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿರುವರು. ಮುಖ್ಯ ಅತಿಥಿ ಗಳಾಗಿ ವಿಜಯಕುಮಾರ್ ಮುದ್ರಾಡಿ ಭಾಗವಹಿಸಲಿದ್ದಾರೆ.

ಸಪ್ತಾಹವು ಪ್ರತಿದಿನ ಸಂಜೆ 7 ಕ್ಕೆ ಆರಂಭವಾಗುತ್ತದೆ. ಅನುಕ್ರಮವಾಗಿ ಅರ್ಜುನಾಂಜನೇಯ - ಶನೀಶ್ವರಾಂಜನೇಯ, ಪಾಂಚಜನ್ಯ, ಪಟ್ಟಾಭಿಷೇಕ, ನಾಗನಂದನೆ, ಶನೀಶ್ವರ ಮಹಾತ್ಮೆ, ಸುಧನ್ವಾರ್ಜುನ ಮತ್ತು ಶ್ರೀಕೃಷ್ಣ ಜನ್ಮ- ಕಂಸವಧೆ ಪ್ರಸಂಗಗಳು ಪ್ರಸ್ತುತಗೊಳ್ಳಲಿವೆ.

ಅ.25ರ ಸಂಜೆ 6:30ಕ್ಕೆ ಸಮಾರೋಪ ಸಮಾರಂ ಉಭಯ ಶ್ರೀಗಳ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ. ಅತಿಥಿಗಳಾಗಿ ಕೆ.ಗಣೇಶ್ ರಾವ್, ಡಾ.ಟಿ. ಎಸ್.ರಾವ್ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ ಇವರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಪ್ರವೀಣ್ ಕುಮಾರ್ ನಂದಳಿಕೆ ಅವರಿಗೆ ಟಿ.ವಿ ರಾವ್ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕಾರ್ಯದರ್ಶಿ ಎಂ.ಗೋಪಿಕೃಷ್ಣ ರಾ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)