varthabharthi

ಕರಾವಳಿ

ಬ್ರಹ್ಮಾವರ: ಫಾರ್ಚೂನ್ ನರ್ಸಿಂಗ್ ಕಾಲೇಜು ಉದ್ಘಾಟನೆ

ವಾರ್ತಾ ಭಾರತಿ : 9 Oct, 2019

ಉಡುಪಿ, ಅ.9: ಫಾರ್ಚೂನ ಅಕಾಡೆಮಿ ಎಂಡ್ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಈ ಶೈಕ್ಷಣಿಕ ಋತುವಿನಿಂದ ಪ್ರಾರಂಭಿಸಲಾದ ಫಾರ್ಚೂನ್ ನರ್ಸಿಂಗ್ ಕಾಲೇಜು, ಫಾರ್ಚೂನ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಷನ್ ಕಾಲೇಜು ಹಾಗೂ ಫಾರ್ಚೂನ ಪ್ಯಾರಾಮೆಡಿಕಲ್ ಕಾಲೇಜುಗಳು ನಾಳೆ ಬ್ರಹ್ಮಾವರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಡಾ.ವಿನಯಚಂದ್ರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಾವರ ಕೇಂದ್ರಿತವಾಗಿ ಗ್ರಾಮೀಣ ಪ್ರದೇಶಗಳ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಅರೆ ವೈದ್ಯಕೀಯ ಶಿಕ್ಷಣ ನೀಡುವ ಉದ್ದೇಶದಿಂದ ಬ್ರಹ್ಮಾವರದ ಕೇಂದ್ರ ಸ್ಥಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಈ ಕಾಲೇಜನ್ನು ಸ್ಥಾಪಿಸಲಾಗಿದೆ ಎಂದರು.

ಬ್ರಹ್ಮಾವರದ ಎಸ್‌ಎಂಎಸ್ ಚರ್ಚ್ ಎದುರಿಗಿರುವ ಮಧುವನ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಕಾಲೇಜು ನಾಳೆ ಬೆಲಗ್ಗೆ 10:30ಕ್ಕೆ ಉದ್ಘಾಟನೆಗೊಳ್ಳಲಿದೆ. ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ.ಮ್ಯಾಥ್ಯೂ ಸಿ.ನೈನಾನ್ ಅವರು ಕಾಲೇಜನ್ನು ಉದ್ಘಾಟಿಸಲಿದ್ದಾರೆ ಎಂದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ಬೆಂಗಳೂರು, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಹಾಗೂ ಕರ್ನಾಟಕ ಸರಕಾರದಿಂದ ಕಾಲೇಜಿಗೆ ಮಾನ್ಯತೆ ದೊರೆತಿದೆ. ನರ್ಸಿಂಗ್‌ನಲ್ಲಿ 40, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ 20, ಪ್ಯಾರ ಮೆಡಿಕಲ್ ಕೋರ್ಸುಗಳಾದ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ,ಓಟಿ ಟೆಕ್ನಾಲಜಿ ಹಾಗೂ ಎಕ್ಸ್‌ರೇ ಟೆಕ್ನಾಲಜಿ ಕೋರ್ಸ್‌ಗಳಿಗೆ ತಲಾ 20 ಸೀಟುಗಳಿರುತ್ತವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ತಾರಾನಾಥ ಶೆಟ್ಟಿ, ಕಾರ್ಯದರ್ಶಿ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)