varthabharthi

ಕರಾವಳಿ

ಎಂಜಿನ್‍ನಲ್ಲಿ ಆಕಸ್ಮಿಕ ಬೆಂಕಿ-ಕಾರು ಬೆಂಕಿಗಾಹುತಿ

ವಾರ್ತಾ ಭಾರತಿ : 9 Oct, 2019

ಬಂಟ್ವಾಳ, ಅ. 9: ಇಂಜಿನ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಕೊಂಡ ಪರಿಣಾಮ ಕಾರೊಂದು ಬೆಂಕಿಗಾಹುತಿಯಾದ ಘಟನೆ ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಕಂಚಿಕಾರ ಪೇಟೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಇಲ್ಲಿನ ಗೂಡಿನಬಳಿ ನಿವಾಸಿ ಸಾದಿಕ್ ಎಂಬವರು ಚಾಲನೆ ಮಾಡುತ್ತಿದ್ದ ಮಾರುತಿ 800 ಕಾರು ಬೆಂಕಿಗೆ ಅಹುತಿಯಾಗಿದೆ. ಕೆಲಸ ನಿಮಿತ್ತ ಕಂಚಿಕಾರ ಪೇಟೆಯಲ್ಲಿ ಚಲಿಸುತ್ತಿದ್ದಾಗ ಕಾರಿನಲ್ಲಿ ಸುಟ್ಟ ವಾಸನೆ ಬಂದು ಈ ಅವಘಡ ಸಂಭವಿಸಿದೆ.

ತಕ್ಷಣ ಚಾಲಕ ಕಾರನ್ನು ನಿಲ್ಲಿಸಿದ್ದು, ಬಳಿಕ ಕಾರಿಗೆ ಏಕಾಏಕಿ ಬೆಂಕಿ ಹಚ್ಚಿಕೊಂಡಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಬಂಟ್ವಾಳ ಅಗ್ನಿಶಾಮಕ ದಳವು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಕಾರು ಸುಟ್ಟು ಕರಕಲಾಗಿದೆ. 

ಶಾರ್ಟ್ ಸಕ್ರ್ಯೂಟ್‍ನಿಂದ ಕಾರು ಬೆಂಕಿಗೆ ಹಚ್ಚಿಕೊಂಡಿರಬಹುದು ಎಂದು ಕಾರು ಮಾಲಕ ಸಾದಿಕ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)