varthabharthi

ಕರಾವಳಿ

ಕಾನೂನು ಸಲಹೆಗಾರ ಹುದ್ದೆಗೆ ನೇಮಕಾತಿ

ವಾರ್ತಾ ಭಾರತಿ : 9 Oct, 2019

ಮಂಗಳೂರು, ಅ.9: ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂಸ್ವಾಧೀನ ಹಾಗೂ ಇತರ ಕಾನೂನು ಸಂಬಂಧಿತ ಪ್ರಕರಣಗಳಲ್ಲಿ ಕಾನೂನು ಸಲಹೆ ನೀಡಲು ಕಾನೂನು ಕೋಶ ಸೃಜನೆಯಾಗಿದ್ದು, ನೇಮಕಾತಿ ಪ್ರಕ್ರಿಯೆ ನಡೆದಿದೆ. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಕಾನೂನು ಕೋಶದಲ್ಲಿ ಒಬ್ಬ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಅಥವಾ ನಿವೃತ್ತ ಹಿರಿಯ ಸಿವಿಲ್ ನ್ಯಾಯಾಧೀಶರು ಅಥವಾ ಕಾನೂನು ಪದವೀಧರರಾಗಿರುವ (ಎಲ್‌ಎಲ್‌ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ/ ನಿವೃತ್ತ ಉಪತಹಶೀಲ್ದಾರ್/ ನಿವೃತ್ತ ಸಿವಿಲ್ ನ್ಯಾಯಾಧೀಶರನ್ನು ರಾಜ್ಯ ನಾಗರಿಕ ಸೇವಾ ನಿಯಮದ ಪ್ರಕಾರ ಮಾಸಿಕ ಸಂಚಿತ ವೇತನ ನಿಗದಿಗೊಳಿಸಿ ನೇಮಕಾತಿಗೊಳಿಸಲು ಆದೇಶಿಸಲಾಗಿದೆ.

ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರರಾಗಿ ನೇಮಕಾತಿ ಹೊಂದಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ಬಯೋಡಾಟಾ ಮತ್ತು ನಿವೃತ್ತಿ ಪೂರ್ವ ಪಡೆಯುತ್ತಿರುವ ವೇತನ ಪ್ರಮಾಣಪತ್ರಗಳೊಂದಿಗೆ ಅ.26ರೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)