varthabharthi

ರಾಷ್ಟ್ರೀಯ

ರವಿಪ್ರಕಾಶ್ ಬಂಧನದ ಹಿಂದೆ ತೆಲಂಗಾಣ ಸಿಎಂ ಕೈವಾಡದ ಆರೋಪ

ಟಿವಿ9 ಮಾಜಿ ಸಿಇಓ ಬಿಡುಗಡೆಗೆ ಸಿಪಿಜೆ ಆಗ್ರಹ

ವಾರ್ತಾ ಭಾರತಿ : 9 Oct, 2019

   ಹೊಸದಿಲ್ಲಿ,ಅ.10: ತೆಲಂಗಾಣ ಮೂಲದ ಪತ್ರಕರ್ತ ರವಿಪ್ರಕಾಶ್ ಅವರ ಬಂಧನವನ್ನು ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ‘ಪತ್ರಕರ್ತರ ರಕ್ಷಣಾ ಸಮಿತಿ’ (ಸಿಪಿಜೆ) ಬುಧವಾರ ಹಲವಾಗಿ ಖಂಡಿಸಿದೆ ಹಾಗೂ ಅವರನ್ನು ಬಿಡುಗಡೆಗೊಳಿಸುವಂತೆ ತೆಲಂಗಾಣ ಸರಕಾರವನ್ನು ಆಗ್ರಹಿಸಿದೆ.

‘ತೊಲಿವೆಲುಗು ನ್ಯೂಸ್’ ಎಂಬ ಸುದ್ದಿಜಾಲತಾಣದಲ್ಲಿ ರವಿ ಪ್ರಕಾಶ್ ಪ್ರಕಟಿಸಿದ್ದ ಟೀಕಾತ್ಮಕ ವರದಿಗೆ ಪ್ರತೀಕಾರವಾಗಿ ಅವ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ . ತೆಲಂಗಾಣ ಸರಕಾರವು ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕಾಗಿದೆ’’ ಎಂದು ಸಿಪಿಜೆ ಏಶ್ಯ ಸಂಸ್ಥೆಯ ಕಾರ್ಯಕ್ರಮ ಸಮನ್ವಯಕಾರರಾದ ಸ್ಟೀವನ್ ಬಟ್ಲರ್ ಆಗ್ರಹಿಸಿದ್ದಾರೆ.

ಟಿವಿ9 ಸುದ್ದಿವಾಹಿನಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಯಾಗಿರುವ ರವಿಪ್ರಕಾಶ್ ಅವರನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹೈದರಬಾದ್ ಪೊಲೀಸರು ಅಕ್ಟೋಬರ್ 5ರಂದು ಬಂಧಿಸಿದ್ದರು. ರವಿಪ್ರಕಾಶ್ ಅವರು ಟಿವಿ9 ಸುದ್ದಿವಾಹಿನಿಯ ಪ್ರವರ್ತಕ ಸಂಸ್ಥೆ ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪೆನಿಯ (ಎಬಿಸಿಎಲ್)ನಿಂದ ವಂಚನೆಯ ವಿಧಾನಗಳ ಮೂಲಕ 18 ಕೋಟಿ ರೂ.ಗಳನ್ನು ಹಿಂಪಡೆದುಕೊಂಡಿದ್ದರೆಂದು ಸಂಸ್ಥೆಯ ಹಾಲಿ ನಿರ್ದೇಶಕರಾದ ಜಿ.ರಂಗಾರಾವ್ ಅವರು ಹೈದರಾಬಾದ್‌ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

  ಈ ವರ್ಷದ ಆರಂಭದಲ್ಲಿ ಎಬಿಸಿಎಲ್ ನಿರ್ಣಯವೊಂದನ್ನು ಅಂಗೀಕರಿಸಿ,ರವಿಪ್ರಕಾಶ್ ಅವರನ್ನು ಬಲವಂತವಾಗಿ ಸಿಇಓ ಹುದ್ದೆಯಿಂದ ಕೆಳಗಿಳಿಸಲಾಗಿತ್ತೆಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.

    ಆದರೆ ರವಿಪ್ರಕಾಶ್ ಅವರು ತೆಲಂಗಾಣ ಮುಖ್ಯಮಂತ್ರಿಕೆ.ಸಿ.ಚಂದ್ರಶೇಖರ್ ಹಾಗೂ ಉದ್ಯಮಿಯ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾದ ಎರಡು ಸಂದರ್ಶನಗಳನ್ನು ಪ್ರಸಾರ ಮಾಡದೆ ಇರಲು ನಿರಾಕರಿಸಿದ್ದಕ್ಕಾಗಿ ಪ್ರಕಾಶ್ ಅವರ ಮೇಲೆ ಸುಳ್ಳು ಮೊಕದ್ದಮೆ ಹೊರಿಸಿ ಬಂಧಿಸಲಾಗಿದೆಯೆಂದು ಟಿವಿ9 ಸುದ್ದಿವಾಹಿನಿಯ ವರದಿಗಾರರು ತಿಳಿಸಿದ್ದಾರೆಂದು ಸಿಪಿಜೆ ಆರೋಪಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)