varthabharthi

ಕರ್ನಾಟಕ

ಪ್ರತಾಪ್ ಸಿಂಹ ಸರಿಯಿಲ್ಲ ಎಂದು ಸಿದ್ದರಾಮಯ್ಯ ಎರಡು ಬಾರಿ ಹೇಳಿದ್ದರು: ಸಚಿವ ವಿ. ಸೋಮಣ್ಣ

ವಾರ್ತಾ ಭಾರತಿ : 9 Oct, 2019

ಮೈಸೂರು: ಸಂಸದ ಪ್ರತಾಪ್ ಸಿಂಹ ಸರಿಯಿಲ್ಲ ಆತನನ್ನು ಜೊತೆಯಲ್ಲಿ ಕರೆದುಕೊಂಡು ತಿರುಗಾಡಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ನನಗೆ ದೂರವಾಣಿ ಮಾಡಿ ಹೇಳಿದ್ದರು ಎಂದು ವಸತಿ ಹಾಗೂ ಮೈಸೂರು  ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

"ಏಯ್ ಸೋಮಣ್ಣ ನೀನು ಅದ್ಯಾವನೊ ಸಂಸದ ಪ್ರತಾಪ್ ಸಿಂಹ ನನ್ನು ಜೊತೆಯಲ್ಲಿ ಕರೆದುಕೊಂಡು ತಿರುಗುತಿದ್ದೀಯಂತೆ, ಆತ ಸರಿಯಿಲ್ಲ ಸ್ವಲ್ಪ ಹುಷಾರಾಗಿರು" ಎಂದು ಹೇಳಿದ್ದರು. ಅದಕ್ಕೆ ನಾನು ಸುಮಾರು ಸಲ ದೂರವಾಣಿ ಮಾಡಿ ಅವರಿಗೂ ಕಾಟಕೊಟ್ಟಿದ್ದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ನಾನು ಸಿದ್ದರಾಮಯ್ಯ ಒಟ್ಟಿಗೆ ಇದ್ದವರು ಅವರಿಗೆ ನನ್ನ ಕಂಡರೆ ಪ್ರೀತಿ ಹಾಗಾಗಿ ಅವರು ಆ ರೀತಿ ಹೇಳಿದ್ದರು ಎನ್ನಿಸುತ್ತದೆ.  ಆದರೂ ನನ್ನ ಜೊತೆ ಎಲ್ಲರೂ ಸಹಕರಿಸಿ ದಸರಾ ಆಚರಣೆಗೆ ಯಶಸ್ವಿಯಾದರು ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)