varthabharthi

ಕರಾವಳಿ

ಮಂಗಳೂರು: ಸಮುದ್ರದಲ್ಲಿ ಅಪರಿಚಿತ ಮೃತದೇಹ ಪತ್ತೆ

ವಾರ್ತಾ ಭಾರತಿ : 9 Oct, 2019

ಮಂಗಳೂರು, ಅ.9: ಸಮುದ್ರದಲ್ಲಿ ಮಂಜೇಶ್ವರದಿಂದ 18 ಹಾಗೂ ಮಂಗಳೂರಿನಿಂದ 25 ನಾಟೆಕಲ್ ಮೈಲು ದೂರದಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಬುಧವಾರ ಪತ್ತೆಯಾಗಿದೆ.

ದವಡೆಯಲ್ಲಿ ಮೂರು ಕೃತಕ ಹಲ್ಲು, ಕೆಂಪು ಚೌಕುಳಿಯ ಶರ್ಟ್, ಹಸಿರು ಬಣ್ಣದ ಬರ್ಮುಡ ಪ್ಯಾಂಟ್ ಧರಿಸಿದ್ದಾರೆ. ಕೋಸ್ಟ್‌ಗಾರ್ಡ್‌ನವರು ಸಮುದ್ರದಲ್ಲಿ ಮೃತದೇಹವನ್ನು ಗಮನಿಸಿ ಹಿಡಿದುಕೊಂಡು ಬಂದು ಪಣಂಬೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ. ಶವವನ್ನು ವೆನ್ಲಾಕ್ ಶವಾಗಾರದಲ್ಲಿಡಲಾಗಿದೆ.

ಮೃತದೇಹವು ಕೆಲವು ದಿನಗಳ ಹಿಂದೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಬಳಿಯ ನಿವಾಸದಿಂದ ನಾಪತ್ತೆಯಾಗಿದ್ದ ಸದಾಶಿವ ಅವರದ್ದಾಗಿರಬಹುದು ಎನ್ನುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಡಿಎನ್‌ಎ ಪರೀಕ್ಷೆ ನಡೆಸಿದರೆ ಈ ಬಗ್ಗೆ ಸ್ಪಷ್ಟಗೊಳ್ಳಲಿದೆ ಎಂದು ಮನೆಯವರು ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ವಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)