varthabharthi

ಬೆಂಗಳೂರು

ಆಕಾಶವಾಣಿಯ ನಿರ್ದೇಶಕ ಜಿ.ಕೆ.ರವೀಂದ್ರ ಕುಮಾರ್ ನಿಧನ

ವಾರ್ತಾ ಭಾರತಿ : 9 Oct, 2019

ಬೆಂಗಳೂರು, ಅ.9: ಆಕಾಶವಾಣಿ ಬೆಂಗಳೂರು ನಿಲಯದ ನಿರ್ದೇಶಕ ಜಿ.ಕೆ.ರವೀಂದ್ರ ಕುಮಾರ್ ಹೃದಯಾಘಾತದಿಂದ ಕಚೇರಿಯಲ್ಲಿಯೇ ನಿಧನರಾಗಿದ್ದಾರೆ.

ಇವರು ಪ್ಯಾಂಜಿಯಾ, ಕದವಿಲ್ಲದ ಊರು, ಪುನರ್ಭವ ಹಾಗೂ ತಾರಸಿ ಮಲ್ಹಾರ್ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಹಲವು ಕವಿಮಿತ್ರರನ್ನು ಆಕಾಶವಾಣಿಗೆ ಕರೆಸಿ, ಅವರಿಂದ ಕವಿತೆಗಳನ್ನು ಓದಿಸಿದ್ದಾರೆ. ಆ ಮೂಲಕ ಹಲವು ಕವಿಗಳ ಕವಿತೆಗಳು ಜನಪ್ರಿಯಗೊಳ್ಳಲು ಕಾರಣರಾಗಿದ್ದಾರೆ.

ಇವರ ಅಗಲಿಕೆಗೆ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ (ಅ.10) ಮಧ್ಯಾಹ್ನ 12ಕ್ಕೆ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)