varthabharthi

ಅಂತಾರಾಷ್ಟ್ರೀಯ

‘ಹ್ಯಾಲಿಬರ್ಟನ್’ನಿಂದ ಮುಸ್ಲಿಮ್ ಉದ್ಯೋಗಿಗಳಿಗೆ ಪರಿಹಾರ

ವಾರ್ತಾ ಭಾರತಿ : 9 Oct, 2019

ನ್ಯೂಯಾರ್ಕ್, ಅ. 9: ಅಮೆರಿಕದ ಪ್ರಮುಖ ಬಹುರಾಷ್ಟ್ರೀಯ ಕಂಪೆನಿ ಹ್ಯಾಲಿಬರ್ಟನ್ ತನ್ನ ಇಬ್ಬರು ಭಾರತ ಮತ್ತು ಸಿರಿಯ ಮೂಲಗಳ ಮುಸ್ಲಿಮ್ ಉದ್ಯೋಗಿಗಳಿಗೆ 2,75,000 ಡಾಲರ್ (ಸುಮಾರು 1.95 ಕೋಟಿ ರೂಪಾಯಿ) ಪರಿಹಾ ನೀಡಲಿದೆ.

ಅವರನ್ನು ಕಂಪೆನಿಯ ಇತರ ಉದ್ಯೋಗಿಗಳು ಧಾರ್ಮಿಕ ತಾರತಮ್ಯಕ್ಕೆ ಗುರಿಪಡಿಸಿದ್ದರು ಹಾಗೂ ಭಯೋತ್ಪಾದಕರೊಂದಿಗೆ ಅವರಿಗೆ ನಂಟಿದೆ ಎಂಬುದಾಗಿ ಆರೋಪಿಸಿದ್ದರು ಎಂದು ಹೇಳಲಾಗಿದೆ.

ವಿದ್ಯುತ್ ಕ್ಷೇತ್ರಕ್ಕೆ ಸಲಕರಣೆಗಳು ಮತ್ತು ಸೇವೆಗಳನ್ನು ಪೂರೈಸುತ್ತಿರುವ ಜಗತ್ತಿನ ಬೃಹತ್ ಕಂಪೆನಿಗಳ ಪೈಕಿ ಒಂದಾಗಿರುವ ಹ್ಯೂಸ್ಟನ್‌ನಲ್ಲಿರುವ ಈ ಕಂಪೆನಿಯು ಪರಿಹಾರ ನೀಡಲು ಒಪ್ಪಿಕೊಂಡಿದೆ.

ಕಂಪೆನಿಯಲ್ಲಿ 55,000ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)