varthabharthi

ಕ್ರೀಡೆ

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬಂಗಾಳ ವಾರಿಯರ್ಸ್

ವಾರ್ತಾ ಭಾರತಿ : 10 Oct, 2019

ಗ್ರೇಟರ್ ನೊಯ್ಡ, ಅ.9: ತಮಿಳ್ ತಲೈವಾಸ್ ತಂಡವನ್ನು 33-29 ಅಂಕಗಳಿಂದ ಮಣಿಸಿದ ಬಂಗಾಳ ವಾರಿಯರ್ಸ್ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

ಇಲ್ಲಿ ಬುಧವಾರ ನಡೆದ 128ನೇ ಪಂದ್ಯದಲ್ಲಿ ವಾರಿಯರ್ಸ್ ಪರ ರೈಡರ್ ಸುಕೇಶ್ ಹೆಗ್ಡೆ(6), ಡಿಫೆಂಡರ್ ರಿಂಕು ನರ್ವಾಲ್(5) ಶ್ರೇಷ್ಠ ಪ್ರದರ್ಶನ ನೀಡಿದರೆ, ಇಸ್ಮಾಯೀಲ್ 7 ಅಂಕ ಗಳಿಸಿದರು.

ತಮಿಳ್ ಪರ ರಾಹುಲ್ ಚೌಧರಿ(7) ಹಾಗೂ ಸಾಗರ್(5)ಒಂದಷ್ಟು ಹೋರಾಟ ನೀಡಿದರು. 22ನೇ ಪಂದ್ಯದಲ್ಲಿ 14ನೇ ಜಯ ದಾಖಲಿಸಿದ ವಾರಿಯರ್ಸ್ ಒಟ್ಟು 83 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ದಿನದ 129ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಸಿದ್ದಾರ್ಥ್ ದೇಸಾಯಿ(15 ಅಂಕ)ಸಾಹಸದಿಂದ 4ನೇ ಸ್ಥಾನದಲ್ಲಿರುವ ಯು.ಪಿ. ಯೋಧಾ ತಂಡವನ್ನು 41-36 ಅಂತರದಿಂದ ಮಣಿಸಿತು. ಯು.ಪಿ. ಪರ ಕನ್ನಡಿಗ ರಿಶಾಂಕ್ ದೇವಾಡಿಗ ಹಾಗೂ ಶ್ರೀಕಾಂತ್ ಜಾಧವ್ ತಲಾ 8 ಅಂಕ ಗಳಿಸಿದರು. ಯು.ಪಿ. 21ನೇ ಪಂದ್ಯದಲ್ಲಿ 7ನೇ ಸೋಲು ಕಂಡಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)