varthabharthi

ಗಲ್ಫ್ ಸುದ್ದಿ

ಮಹಿಳೆಯರು ಇನ್ನು ಸಶಸ್ತ್ರ ಪಡೆಗಳಿಗೆ ಸೇರಬಹುದು: ಸೌದಿ ಘೋಷಣೆ

ವಾರ್ತಾ ಭಾರತಿ : 10 Oct, 2019

ರಿಯಾದ್, ಅ. 10: ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಜಾರಿಯಲ್ಲಿರುವ ಸೌದಿ ಅರೇಬಿಯದಲ್ಲಿ ಮಹಿಳೆಯರು ಇನ್ನು ಮುಂದೆ ದೇಶದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಬಹುದು.

ದೇಶದಲ್ಲಿ ಮಹಿಳೆಯರಿಗೆ ಹೆಚ್ಚೆಚ್ಚು ಹಕ್ಕುಗಳನ್ನು ನೀಡುತ್ತಿರುವ ಅವಧಿಯಲ್ಲಿ ಇದು ಆ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.

‘‘ಮಹಿಳೆಯರ ಸಬಲೀಕರಣದತ್ತ ಇನ್ನೊಂದು ಹೆಜ್ಜೆ’’ ಎಂದು ಸೌದಿ ವಿದೇಶ ಸಚಿವಾಲಯ ಟ್ವಿಟರ್‌ನಲ್ಲಿ ಬರೆದಿದೆ. ‘‘ಪ್ರೈವೇಟ್ ಫಸ್ಟ್ ಕ್ಲಾಸ್, ಕಾರ್ಪೊರಲ್ ಅಥವಾ ಸಾರ್ಜಂಟ್ ಆಗಿ ಸೇವೆ ಸಲ್ಲಿಸಲು ಮಹಿಳೆಯರು ಸಮರ್ಥರಾಗಿದ್ದಾರೆ’’ ಎಂದು ಅದು ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)