varthabharthiರಾಷ್ಟ್ರೀಯ

ಉತ್ತರ ಪ್ರದೇಶ ರಾಮರಾಜ್ಯವಲ್ಲ, ನಾಥೂರಾಮ ರಾಜ್ಯ: ಅಖಿಲೇಶ್ ಆಕ್ರೋಶ

ವಾರ್ತಾ ಭಾರತಿ : 10 Oct, 2019

ಲಕ್ನೋ, ಅ.10: ಉತ್ತರ ಪ್ರದೇಶವು ರಾಮರಾಜ್ಯವಲ್ಲ, ಬದಲಾಗಿ ನಾಥೂರಾಮ ರಾಜ್ಯ ಎಂದು ಆದಿತ್ಯನಾಥ್ ಸರಕಾರದ ವಿರುದ್ಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಂಪುಹತ್ಯೆಯ ಜೊತೆಗೆ ಪೊಲೀಸರಿಂದ ಗುಂಪು ಹತ್ಯೆಯೂ ರಾಜ್ಯದಲ್ಲಿ ಆರಂಭಗೊಂಡಿದೆ ಎಂದು ಅವರು ಈ ಸಂದರ್ಭ ಹೇಳಿದರು. ನಕಲಿ ಎನ್ ಕೌಂಟರ್ ಎಂದು ಆರೋಪಿಸಲಾದ ಪ್ರಕರಣದಲ್ಲಿ ಮೃತಪಟ್ಟ ಯುವಕನ ಮನೆಗೆ ಭೇಟಿ ನೀಡಿ ಅವರು ಮಾತನಾಡುತ್ತಿದ್ದರು.

"ಉತ್ತರ ಪ್ರದೇಶದಲ್ಲಿ ಯಾವ ರಾಮ ರಾಜ್ಯ ನಡೆಯುತ್ತಿದೆ. ಇದು ರಾಮ ರಾಜ್ಯವಲ್ಲ, ನಾಥೂರಾಮ ರಾಜ್ಯ. ಗುಂಪು ಹತ್ಯೆಯ ಜೊತೆ ಪೊಲೀಸ್ ಗುಂಪು ಹತ್ಯೆಯೂ ರಾಜ್ಯದಲ್ಲಿ ಆರಂಭಗೊಂಡಿದೆ" ಎಂದು ಅಖಿಲೇಶ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)