ಅನಧಿಕೃತ ಮ್ಯಾರಥಾನ್: ಇತಿಹಾಸ ನಿರ್ಮಿಸಿದ ಕಿಪ್ಚೊಗ್
ವಿಯೆನ್ನಾ, ಅ.12: ಕ್ರೀಡಾ ಆಡಳಿತ ಮಂಡಳಿಯಿಂದ ಗುರುತಿಸಲ್ಪಡದ ಅನಧಿಕೃತ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಎರಡು ಗಂಟೆಯೊಳಗೆ ಗುರಿ ತಲುಪಿದ ಕೀನ್ಯದ ಎಲಿಯುಡ್ ಕಿಪ್ಚೊಗ್ ಅಥ್ಲೆಟಿಕ್ಸ್ನಲ್ಲಿ ಹೊಸ ಇತಿಹಾಸ ರಚಿಸಿದರು. ಕಿಪ್ಚೊಗ್ 2 ಗಂಟೆಯೊಳಗೆ ಮ್ಯಾರಥಾನ್ ಮುಗಿಸಿದ ಮೊದಲ ಓಟಗಾರ ಎನಿಸಿಕೊಂಡರು.
ವಿಯೆನ್ನಾ ಪ್ರಾಟರ್ ಪಾರ್ಕ್ನಲ್ಲಿ ಶನಿವಾರ ಒಂದು ಗಂಟೆ, 59:40 ನಿಮಿಷಗಳಲ್ಲಿ ಗುರಿ ತಲುಪಿದ ಒಲಿಂಪಿಕ್ಸ್ ಮ್ಯಾರಥಾನ್ ಚಾಂಪಿಯನ್ ಹಾಗೂ ವಿಶ್ವ ದಾಖಲೆ ವೀರ ಕಿಪ್ಚೊಗ್ ಹೊಸ ದಾಖಲೆ ನಿರ್ಮಿಸಿದರು.
Next Story