varthabharthiರಾಷ್ಟ್ರೀಯ

ಯುವಜನರು ಉದ್ಯೋಗ ಕೇಳಿದರೆ ಸರಕಾರ ಚಂದ್ರನನ್ನು ನೋಡಲು ಹೇಳುತ್ತಿದೆ: ರಾಹುಲ್ ಗಾಂಧಿ

ವಾರ್ತಾ ಭಾರತಿ : 13 Oct, 2019

ಹೊಸದಿಲ್ಲಿ, ಅ.13: ರೈತರ ಸಮಸ್ಯೆ, ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದೇ ಮಾಧ್ಯಮಗಳು, ಮೋದಿ ಮತ್ತು ಶಾ ಅವರ ಕೆಲಸವಾಗಿಬಿಟ್ಟಿದೆ. ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಸುಮ್ಮನಾಗಿವೆ. ಶ್ರೀಮಂತರ ಸಾಲಮನ್ನಾ ಬಗ್ಗೆ ಮಾಧ್ಯಮಗಳು ಸುಮ್ಮನಾಗಿವೆ. ಏಕೆಂದರೆ ಅದು ಶ್ರೀಮಂತರ ಕೈಯಲ್ಲೇ ಇದೆ" ಎಂದು ಮಹಾರಾಷ್ಟ್ರದ ಲಾತುರ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ರಾಹುಲ್ ಹೇಳಿದರು.

ನಂತರ ಮಾತನಾಡಿದ ಅವರು, "ಯುವಜನರು ಉದ್ಯೋಗ ಕೇಳಿದರೆ ಸರಕಾರ ಅವರಿಗೆ ಚಂದ್ರನನ್ನು ನೋಡಲು ಹೇಳುತ್ತದೆ. 370ನೆ ವಿಧಿ ರದ್ದತಿ ಬಗ್ಗೆ ಸರಕಾರ ಮಾತನಾಡುತ್ತದೆ. ಆದರೆ ದೇಶದಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಸುಮ್ಮನಾಗಿದೆ" ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)