varthabharthi


ಕರಾವಳಿ

ಬೆಳ್ಳಾರೆ: ಆರೋಗ್ಯ ಮಾಹಿತಿ ಶಿಬಿರ, ಸನ್ಮಾನ ಕಾರ್ಯಕ್ರಮ

ವಾರ್ತಾ ಭಾರತಿ : 13 Oct, 2019

ವಿಟ್ಲ : ಬೆಳ್ಳಾರೆ ಸಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮವು ಇಲ್ಲಿನ ರಾಜೀವ್ ಗಾಂಧಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸುಳ್ಯ ತಾಲೂಕು ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ  ತ್ವಬೀಬ್ ಹಸನ್ ಅರ್ಶದಿ ಬೆಳ್ಳಾರೆ ಉದ್ಘಾಟಿಸಿದರು.  ಟ್ರಸ್ಟ್ ನ ಸ್ಥಾಪಕಧ್ಯಕ್ಷ ಯು.ಎಚ್. ಅಬೂಬಕರ್ ಸಭೆಯ ಅಧ್ಯಕ್ಷ ತೆ ವಹಿಸಿದ್ದರು.

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮಾಜಿ ಮುದರ್ರಿಸ್ ತ್ವಬೀಬ್ ಶಾಫಿ ಇರ್ಫಾನಿ ಫೈಝಿ ಮಾತನಾಡಿ ಆಧುನಿಕ ಯುಗದಲ್ಲಿ ಪ್ರವಾದಿ ಚಿಕಿತ್ಸಾ ಪ್ರಸಕ್ತಿಯ ಮಹತ್ವತೆ ಕುರಿತು ಅರಿತು ಅದನ್ನು ಅನುಸರಿಸಿ ನಡೆದರೆ ಉತ್ತಮ ಆರೋಗ್ಯವನ್ನು ಪಡೆಯುದರಲ್ಲಿ  ಸಂದೇಹವಿಲ್ಲ ಎಂದರು.

ಸಾಧಕರಿಗೆ , ಹಿರಿಯರಿಗೆ ಸನ್ಮಾನ

ತ್ವಬೀಬ್ ಪದವೀಧರರಾದ ತ್ವಬೀಬ್ ಹಸನ್ ಅರ್ಶದಿ ಬೆಳ್ಳಾರೆ , ತ್ವಬೀಬ್ ಶಾಫಿ ಇರ್ಫಾನಿ ಫೈಝಿ ಇವರನ್ನು ಸನ್ಮಾನಿಸಲಾಯಿತು. ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ, ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಹಿರಿಯರಾದ ಅಬ್ಬು ಮುಕ್ರಿಕ , ಪುತ್ತಬ್ಬ ಮುಕ್ರಿಕ , ಹಸೈನಾರ್ ಹಾಜಿ , ಸಾಬೂ ಹಾಜಿ , ಕಳೆದ ಸಾಲಿನ ಮದರಸ ವಾರ್ಷಿಕ ಪಬ್ಲಿಕ್  ಪರೀಕ್ಷೆ ಯಲ್ಲಿ  ರೇಂಜ್ ಮಟ್ಟದಲ್ಲಿ ದ್ವಿತೀಯ ಸ್ಥಾನಿಯಾದ ಆಯಿಷತ್ ನಾಝ್, ಡಿಸ್ಟಿಂಕ್ಷನ್ ಪಡೆದ ಫಾತಿಮತ್ ಶಬೀಬಾ ಅಭಿನಂದಿಸಲಾಯಿತು.

ಹಾಜಿ ಪಿ. ಇಸಾಕ್ ಸಾಹೇಬ್ ಪಾಜಪಳ್ಳ , ಹಾಜಿ ಮಹಮ್ಮದ್ ಇಂಜೀನಿಯರ್, ಹಾಜಿ ಅಬ್ದುಲ್ ಖಾದರ್ ಬಯಂಬಾಡಿ, ಉದ್ಯಮಿ ಇಬ್ರಾಹೀಂ ಹಾಜಿ ಕತ್ತಾರ್ ,  ಬೆಳ್ಳಾರೆ ಗ್ರಾ.ಪಂ ಉಪಾಧ್ಯಕ್ಷ ಮುಸ್ತಫಾ ಬೆಳ್ಳಾರೆ ,  ಸದಸ್ಯ ಆರೀಫ್ ಬೆಳ್ಳಾರೆ , ಇಬ್ರಾಹೀಂ ಅಂಬಟಗದ್ದೆ , ಹಂಝ ಮುಸ್ಲಿಯಾರ್, ಸಪುತ್ತುಂಞ ಹಾಜಿ , ಅಬೂಬಕ್ಕರ್ ಹಾಜಿ , ಹುಸೈನ್ ಸಾಹೇಬ್ , ಹಸೈನಾರ್ ಪೆರುವಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಟ್ರಸ್ಟ್ ನ ಕಾರ್ಯ ದರ್ಶಿ ಅಬ್ದುಲ್ ರಹ್ಮಾನ್ ಸ್ವಾಗತಿಸಿ, ಯು.ಪಿ. ಬಶೀರ್ ವಂದಿಸಿದರು. ಕೆ.ಎಸ್. ಜಮಾಲುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)