varthabharthi

ಕ್ರೀಡೆ

ಗಂಗುಲಿ, ಧೋನಿಗಿಂತ ಕೊಹ್ಲಿಯೇ ಉತ್ತಮ ನಾಯಕ: ಗಂಭೀರ್

ವಾರ್ತಾ ಭಾರತಿ : 14 Oct, 2019

ಹೊಸದಿಲ್ಲಿ, ಅ.13: ದಾಖಲೆ ಏಳನೇ ದ್ವಿಶತಕ(ಔಟಾಗದೆ 254 ರನ್)ಸಿಡಿಸಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 601 ರನ್ ಗಳಿಸಿ ಭಾರತದ ಭರ್ಜರಿ ಗೆಲುವಿನ ಬುನಾದಿ ಹಾಕಿಕೊಟ್ಟಿದ್ದ ವಿರಾಟ್ ಕೊಹ್ಲಿಗೆ ಎಲ್ಲೆಡೆ ಪ್ರಶಂಸಗಳ ಸುರಿಮಳೆಯಾಗುತ್ತಿದೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರು ಕೊಹ್ಲಿ ನಾಯಕತ್ವವನ್ನು ಮಾಜಿ ನಾಯಕರಿಗೆ ಹೋಲಿಕೆ ಮಾಡಿ ಬಾಯ್ತುಂಬ ಹೊಗಳಿದರು.

‘‘ನೀವು ಸೋಲಿಗೆ ಹೆದರಿದರೆ ಗೆಲ್ಲಲು ಸಾಧ್ಯವಿಲ್ಲ. ಬಹುಶಃ ಇದುವೇ ಕೊಹ್ಲಿಯ ಧನಾತ್ಮಕ ಅಂಶ. ಅವರು ಸೋಲಿಗೆ ಯಾವತ್ತೂ ಅಂಜುವುದಿಲ್ಲ. ಕೊಹ್ಲಿ ಮಾಜಿ ನಾಯಕರಾದ ಸೌರವ್ ಗಂಗುಲಿ, ರಾಹುಲ್ ದ್ರಾವಿಡ್ ಹಾಗೂ ಎಂಎಸ್ ಧೋನಿಗಿಂತ ಉತ್ತಮ ನಾಯಕನಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ವಿದೇಶಿ ನೆಲದಲ್ಲಿ ಗೆಲ್ಲಲು ಆರಂಭಿಸಿತು’’ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)