varthabharthi


ಕ್ರೀಡೆ

ಕೋಲ್ಕತಾ ತಲುಪಿದ ಭಾರತದ ಫುಟ್ಬಾಲ್ ತಂಡ

ವಾರ್ತಾ ಭಾರತಿ : 14 Oct, 2019

ಕೋಲ್ಕತಾ, ಅ.13: ಬಾಂಗ್ಲಾದೇಶ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯವನ್ನಾಡಲು 23 ಸದಸ್ಯರುಗಳನ್ನೊಳಗೊಂಡ ಭಾರತೀಯ ಫುಟ್ಬಾಲ್ ತಂಡ ರವಿವಾರ ಕೋಲ್ಕತಾಕ್ಕೆ ತಲುಪಿದೆ. ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಮಾರ್ಗದರ್ಶನದಲ್ಲಿ ಪಳಗಿರುವ ಭಾರತ ಮಂಗಳವಾರ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಭಾರತ 2011ರ ಬಳಿಕ ಮೊದಲ ಬಾರಿ ಕೋಲ್ಕತಾದಲ್ಲಿ ಫುಟ್ಬಾಲ್ ಪಂದ್ಯವನ್ನು ಆಡುತ್ತಿದೆ. ನಗರ ಹಾಗೂ ಉಪನಗರಗಳಲ್ಲಿ ಫುಟ್ಬಾಲ್ ಅಭಿಮಾನಿಗಳು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)