ಮೂಡುಬಿದಿರೆ: ಕೋಳಿ ಅಂಕಕ್ಕೆ ದಾಳಿ-ನಾಲ್ವರ ಬಂಧನ
ಮೂಡುಬಿದಿರೆ, ಅ.14: ಸಮೀಪದ ಪುಚ್ಚಮೊಗರು ಗ್ರಾಮದ ಮುಜಿನಕೋಡಿಯ ಗುಡ್ಡದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ತಾಣಕ್ಕೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ಬಂಧಿಸಿ, ಸುಮಾರು 1.40 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದ ಘಟನೆ ರವಿವಾರ ನಡೆದಿದೆ.
ಇಲ್ಲಿನ ಪುಚ್ಚೆಮೊಗರು ಗ್ರಾಮದ ಮುಜಿನಕೋಡಿ ಎಂಬಲ್ಲಿನ ಗುಡ್ಡ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸ್ ನಿರೀಕ್ಷಕ ಬಿ ಎಸ್ ದಿನೇಶ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆಗೆ ಇತರ ಆರೋಪಿಗಳು ಪರಾರಿಯಾಗಿದ್ದು, ಇರುವೈಲಿನ ಚಂದ್ರಹಾಸ, ಕರ್ಪೆಯ ಹರೀಶ, ಕುಪ್ಪೆಪದವಿನ ಲೋಕೇಶ ಮತ್ತು ಇರುವೈಲಿನ ಶಾಂತಾರಾಮ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳದಲ್ಲಿ ಆರು ಹುಂಜಗಳು, 850 ರೂ. ನಗದು, 9 ಬೈಕ್, ಒಂದು ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story