varthabharthi


ನಿಮ್ಮ ಅಂಕಣ

ಡಾಮರೀಕರಣ ಮಾಡಿ

ವಾರ್ತಾ ಭಾರತಿ : 18 Oct, 2019
-ಆನಂದ ಕಾಂಚನ್, ಮಂಗಳೂರು

ಮಾನ್ಯರೇ,

ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿಯಿಂದ ನಂತೂರುವರೆಗಿನ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಸ್ಥಳೀಯ ಸಂಸದರು ಈ ತಿಂಗಳ ಅಂತ್ಯದೊಳಗೆ ಹೆದ್ದಾರಿಯನ್ನು ಸರಿಪಡಿಸಲಾಗುತ್ತದೆ ಎಂದಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೆದ್ದಾರಿಯ ಈ ಪ್ರದೇಶದಲ್ಲಿ ಹೆಚ್ಚಾಗಿ ಘನವಾಹನಗಳೇ ಸಂಚರಿಸುತ್ತಿರುತ್ತವೆ. ಆದ್ದರಿಂದ ಹೆದ್ದಾರಿಗೆ ತೇಪೆ ಹಾಕದೆ ಸಂಪೂರ್ಣ ಡಾಮರೀಕರಣ ಮಾಡಿದರೆ ಮುಂದಿನ ದಿನಗಳಲ್ಲಿ ಹೆದ್ದಾರಿ ಹಾಳಾಗುವುದು ತಪ್ಪೀತು.

-ಆನಂದ ಕಾಂಚನ್, ಮಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)