varthabharthi


ಕರ್ನಾಟಕ

ಹಿರಿಯ ಸಾಹಿತಿ, ದಲಿತ ಹೋರಾಟಗಾರ ಕೆ.ಬಿ.ಸಿದ್ದಯ್ಯ ನಿಧನ

ವಾರ್ತಾ ಭಾರತಿ : 18 Oct, 2019

ತುಮಕೂರು: ಸಾಹಿತಿ, ದಲಿತ ಹೋರಾಟಗಾರ ಕೆ.ಬಿ.ಸಿದ್ದಯ್ಯ ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಮೂಲತಃ ಮಾಗಡಿ ತಾಲೂಕಿನವರಾದ  ಕೆ.ಬಿ.ಸಿದ್ದಯ್ಯ ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ, ನಿವೃತ್ತರಾಗಿದ್ದರು.

1970-80ರ ದಶಕದಲ್ಲಿ ದಲಿತ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ ಅಯಾಯ ಸಂದರ್ಭ ಗಳಿಗೆ ಅನುಗುಣವಾಗಿ ಹಾಡುಗಳನ್ನು ರಚಿಸಿ, ಹಾಡುವ ಮೂಲಕ ಚಳವಳಿ ಕಾವು ಪಡೆದುಕೊಳ್ಳಲು ಸಹಕಾರಿಯಾಗಿದ್ದರು.

ದಕ್ಕಲ ಕಥಾದೇವಿ, ಬಕಾಲ, ಗಲ್ಲೆಭಾನಿ ಸೇರಿದಂತೆ ಹಲವು ಖಂಡಕಾವ್ಯ ರಚಿಸಿ ತಳ ಸಮುದಾಯದ ನೋವು ನಲಿವುಗಳಿಗೆ ಧ್ವನಿ ಯಾಗಿದ್ದರು.
ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಇಂದು ಬೆಳಗ್ಗೆ ಕೊನೆಯುಸಿರೆಳೆದರು.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)