varthabharthi


ಕ್ರೀಡೆ

ದೀರ್ಘಕಾಲದ ಗೆಳತಿಯನ್ನು ವಿವಾಹವಾದ ನಡಾಲ್

ವಾರ್ತಾ ಭಾರತಿ : 20 Oct, 2019

ಮ್ಯಾಡ್ರಿಡ್, ಅ.20: ಸ್ಪೇನ್‌ನ ಟೆನಿಸ್ ಸ್ಟಾರ್ ರಫೆಲ್ ನಡಾಲ್ ತನ್ನ ದೀರ್ಘ ಕಾಲದ ಗೆಳತಿ ಸಿಸ್ಕಾ ಪೆರೆಲೊರನ್ನು ಶನಿವಾರ ವಿವಾಹವಾಗಿದ್ದಾರೆ. 33 ವರ್ಷದ ನಡಾಲ್ ಹಾಗೂ 31 ವರ್ಷದ ಪೆರೆಲೊ 14 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ನಡಾಲ್ ಸೋದರಿ ಮಾರಿಬೆಲ್ ಹಾಗೂ ಪೆರೆಲೊ ಬಾಲ್ಯಕಾಲದ ಗೆಳತಿಯರಾಗಿದ್ದು ಮಾರಿಬೆಲ್ ತನ್ನ ಸೋದರನನ್ನು ಪೆರೆಲೊಗೆ ಪರಿಚಯ ಮಾಡಿಸಿಕೊಟ್ಟ ಬಳಿಕ ಅವರಿಬ್ಬರು ಹತ್ತಿರವಾಗಿದ್ದರು. ಮಲೋರ್ಕ ಕ್ಯಾಸಲ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ನಡಾಲ್ ಹಾಗೂ ಪೆರೆಲೊರ ಕುಟುಂಬದವರು, ಆತ್ಮೀಯರು ಸೇರಿದಂತೆ ಸುಮಾರು 300 ಮಂದಿ ಹಾಜರಿದ್ದರು. ಇದೊಂದು ಖಾಸಗಿ ಸಮಾರಂಭವಾಗಿತ್ತು ಎಂದು ನಡಾಲ್ ಕುಟುಂಬದವರು ತಿಳಿಸಿದ್ದಾರೆ. ಮದುವೆ ನಡೆದ ಸಭಾಂಗಣದಲ್ಲಿದ್ದ ಕುರ್ಚಿಗಳಲ್ಲಿ ಒಂದು ಸಂದೇಶವನ್ನು ಅಂಟಿಸಲಾಗಿತ್ತು. ‘ನಮ್ಮ ಮದುವೆ ಸಮಾರಂಭದಲ್ಲಿ ಖುಷಿಯಿಂದ ಪಾಲ್ಗೊಳ್ಳಿ. ಆದರೆ ಗೋಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕುರ್ಚಿಯ ಎದುರು ಇರುವ ಲಾಕೆಟ್‌ನಲ್ಲಿ ದಯವಿಟ್ಟು ನಿಮ್ಮ ಮೊಬೈಲ್ ಫೋನನ್ನು ಹಾಕಿಬಿಡಿ’ ಎಂಬ ಸಂದೇಶ ಅದರಲ್ಲಿತ್ತು ಎಂದು ಸ್ಪೇನ್‌ನ ಪತ್ರಿಕೆಗಳು ವರದಿ ಮಾಡಿವೆ. ರಫೆಲ್ ನಡಾಲ್ 19 ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)