ಮಹಾರಾಷ್ಟ್ರ ಚುನಾವಣೆ: ಹಲವೆಡೆ ಇವಿಎಂಗಳಲ್ಲಿ ದೋಷ
ಚು.ಆಯೋಗಕ್ಕೆ ಕಾಂಗ್ರೆಸ್ ದೂರು
ಮುಂಬೈ,ಅ.21: ಸೋಮವಾರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ರತ್ನಾಗಿರಿ ಮತ್ತು ಭಂಡಾರಾ ಜಿಲ್ಲೆಗಳಲ್ಲಿಯ ಕೆಲವು ಮತಗಟ್ಟೆಗಳಲ್ಲಿ ದೋಷಪೂರಿತ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ಗಳಿಂದಾಗಿ ಮತದಾನವು ವಿಳಂಬಗೊಂಡಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.ಇವಿಎಂಗಳ ಅಸಮರ್ಪಕ ಕಾರ್ಯನಿರ್ವಹಣೆಯ ಕುರಿತು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಿದೆ.
ಮತದಾನ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದರು.
ಇವಿಎಂ ಲೋಪದಿಂದಾಗಿ ಕೆಲವು ಮತಗಟ್ಟೆಗಳಲ್ಲಿ ಅರ್ಧ ಗಂಟೆಯಿಂದ ಮೂರು ಗಂಟೆಗಳವರೆಗೆ ಮತದಾನ ಸ್ಥಗಿತಗೊಂಡಿದ್ದರಿಂದ ಅವುಗಳ ಹೊರಗೆ ಮತದಾರರ ಉದ್ದನೆಯ ಸರದಿ ಸಾಲುಗಳು ಕಂಡು ಬಂದಿದ್ದವು.
ಎಲ್ಲ 228 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿತ್ತು.
Next Story